Friday, April 19, 2024
spot_imgspot_img
spot_imgspot_img

ಮೈಸೂರು ಅರಮನೆ ಕ್ಯಾಂಡಲ್ ಹೋಲ್ಡರ್ ಆನ್’ಲೈನ್’ನಲ್ಲಿ ಹರಾಜು: ರಾಜಮನೆತನದ ಸ್ಪಷ್ಟನೆ ಏನು?

- Advertisement -G L Acharya panikkar
- Advertisement -

ಮೈಸೂರು: ನಗರದ ಮೈಸೂರು ರಾಜಮನೆತನದ ಮುದ್ರೆ ಹೊಂದಿರುವ ಗುಮ್ಮಟ ವಿನ್ಯಾಸದ ಓಸ್ಲರ್ ಫ್ಲೋರ್ ಕ್ಯಾಂಡೆಲಾಬ್ರಮ್ (ಕ್ಯಾಂಡಲ್ ಹೋಲ್ಡರ್)  ಆನ್ಲೈನ್ ಹರಾಜಿನಲ್ಲಿ ಕಾಣಿಸಿಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.


ಪ್ರಮುಖ ಆಂಟಿಕ್ ಹರಾಜು ಸಂಸ್ಥೆ ʻಅಷ್ಟಗುರುʼ ತನ್ನ ತಾಣದಲ್ಲಿ ಜನವರಿ 27, 28 ರಂದು ಹರಾಜು ಪ್ರಕ್ರಿಯೆ ನಡೆಸಿತು. ಈ ಹರಾಜು ಪ್ರಕ್ರಿಯೆಯಲ್ಲಿ  ರಾಜಮನೆತನದ ಮುದ್ರೆ ಹೊಂದಿರುವ ಗುಮ್ಮಟ ವಿನ್ಯಾಸದ ಓಸ್ಲರ್ ಫ್ಲೋರ್ ಕ್ಯಾಂಡೆಲಾಬ್ರಮ್ (ಕ್ಯಾಂಡಲ್ ಹೋಲ್ಡರ್) ಕಾಣಿಸಿಕೊಂಡಿದೆ.

ಕ್ಯಾಂಡಲ್ ಹೋಲ್ಡರ್ ನ  ಪ್ರತಿ ಕ್ಯಾಂಡಲ್ ಬಲ್ಬ್ ನಲ್ಲೂ ಅರಮನೆಯ ಮುದ್ರೆ ಇದೆ. ಇದು 19ನೇ ಶತಮಾನದ ಉತ್ತರಾರ್ಧದ್ದಾಗಿದೆ. ಇದನ್ನು ಲಂಡನ್ನಿನ ಬರ್ಮಿಂಗ್ ಹ್ಯಾಮ್ ನಲ್ಲಿ ಎಫ್ ಅಂಡ್ ಸಿ ಓಸ್ಲರ್ ಸಂಸ್ಥೆ ತಯಾರಿಸಿತು. ನಂತರ ಮೈಸೂರು ಅರಮನೆಯ ಸಂಗ್ರಹವಾಗಿತ್ತು.  ಇದರ ಅಂದಾಜು ಬೆಲೆ 25 ಲಕ್ಷದಿಂದ 30 ಲಕ್ಷ ರೂ. ಆಗಿದೆ ಎಂದು ‘ಅಷ್ಟಗುರು’ ತನ್ನ ತಾಣದಲ್ಲಿ ತಿಳಿಸಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಮೈಸೂರು ರಾಜಮನೆತದ ಪ್ರಮೋದಾದೇವಿ ಒಡೆಯರ್‍, ʻಅಷ್ಟಗುರುʼ ಒಂದು ಪ್ರಮುಖ ಹರಾಜು ಸಂಸ್ಥೆ. ಆದರೆ ಈ ಸಂಸ್ಥೆ ಮಾರಾಟಕ್ಕೆ ಇಟ್ಟಿರುವ ದೀಪವು ನಮ್ಮ ಮೈಸೂರು ರಾಜಮನೆತನಕ್ಕೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!