Tuesday, June 30, 2026
spot_imgspot_img
spot_imgspot_img

ಬಹಿರ್ದೆಸೆಗೆ ತೆರಳಿದ ಯುವಕನ ಮೇಲೆ ದಾಳಿ ನಡೆಸಿದ ಹುಲಿ!

- Advertisement -
- Advertisement -

ಮೈಸೂರು: ಯುವಕನೊಬ್ಬ ಹುಲಿ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿಯಲ್ಲಿ ನಡೆದಿದೆ. ಹುಲಿ ದಾಳಿಗೆ ಬಲಿಯಾದ ವ್ಯಕ್ತಿ ಅಯ್ಯನಕೆರೆ ಹಾಡಿ ನಿವಾಸಿ ಗಣೇಶ್ (24) ಎನ್ನಲಾಗಿದೆ.

ಮೂರು ತಿಂಗಳ ಹೊಂದೆಯಷ್ಟೆ ಗಣೇಶ್ ಎಂಬುವವರಿಗೆ ಮದುವೆಯಾಗಿತ್ತು. ಬುಧವಾರ ಬೆಳಗ್ಗೆ ಗಣೇಶ್ ಹಾಡಿಯ ಅಂಚಿನಲ್ಲಿರುವ ಕಾಡಿಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಹುಲಿ ದಾಳಿ ಮಾಡಿ ಅವರ ಮುಖದ ಕೆಲ ಭಾಗವನ್ನು ತಿಂದು, ಮೃತದೇಹವನ್ನು ಎಳೆದುಕೊಂಡು ಹೋಗಿದೆ.

ಮಧ್ಯಾಹ್ನ ಹೊತ್ತಾದರು ಗಣೇಶ್ ಮನೆಗೆ ವಾಪಸು ಬರದೇ ಇದ್ದ ಕಾರಣ ಆತನ ಪತ್ನಿ ಹಾಗೂ ಸಹೋದರ ಕಾಡಿನಲ್ಲಿ ಹುಡುಕಾಡಿದ್ದಾರೆ. ಕೆರೆಯ ಬಳಿ ಗಣೇಶನ ಚಪ್ಪಲಿ, ಹುಲಿ ಹೆಜ್ಜೆ, ರಕ್ತದ ಕಲೆಗಳು, ಎಳೆದೊಯ್ದಿರುವ ಕುರುಹು ಕಂಡುಬಂದಿದೆ. ಬಳಿಕ ಪೊದೆಯೊಳಗೆ ಶವ ಪತ್ತೆಯಾಗಿದೆ.

- Advertisement -

Related news

error: Content is protected !!