Monday, June 29, 2026
spot_imgspot_img
spot_imgspot_img

ಜುಲೈ 3ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ ‘ಅಪರಾಧಿ ನಾನಲ್ಲ’ – ಎಸ್.ಎಲ್.ವಿ. ಕಲರ್ಸ್‌ನ ಸೂಪರ್ ಥ್ರಿಲ್ಲರ್’ – ಜುಲೈ 1ರಂದು ಪುತ್ತೂರಿನಲ್ಲಿ ಪ್ರೀಮಿಯರ್ ಶೋ

- Advertisement -
- Advertisement -

ಪುತ್ತೂರು: ಎಸ್.ಎಲ್.ವಿ. ಕಲರ್ಸ್ ನಿರ್ಮಾಣದ, ಯಶಂತ್ ಕಲ್ಲಡ್ಕ ನಿರ್ದೇಶನದ ಸೂಪರ್ ಥ್ರಿಲ್ಲರ್ ಕನ್ನಡ ಚಿತ್ರ ‘ಅಪರಾಧಿ ನಾನಲ್ಲ’ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ನಾಯಕನಾಗಿ ಅಭಿನಯಿಸಿದ್ದು, ಅಮೃತ ಮೂರ್ತಿ ಹಾಗೂ ಶ್ರೀಶಾ ಸಾಮಾನಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದ ನಟಿ ಜ್ಯೋತಿ ರೈ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ನವೀನ್ ಡಿ. ಪಡೀಲ್, ಅರ್ಜುನ್ ಕಜೆ, ಅನೂಪ್ ಸಾಗರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಸಿನಿಪ್ರಿಯರ ಗಮನ ಸೆಳೆದಿದ್ದು, ವಿಭಿನ್ನ ಕಥಾಹಂದರ ಮತ್ತು ಥ್ರಿಲ್ಲರ್ ಅಂಶಗಳಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರದ ಮೊದಲ ಪ್ರೀಮಿಯರ್ ಶೋ ಜುಲೈ 1ರಂದು ಸಂಜೆ 4 ಗಂಟೆಗೆ ಪುತ್ತೂರಿನ ಜಿ.ಎಲ್. ಒನ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ನಡೆಯಲಿದೆ. ಚಿತ್ರತಂಡವು ಕುಟುಂಬ ಸಮೇತರಾಗಿ ಆಗಮಿಸಿ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.ಎಸ್.ಎಲ್.ವಿ. ಕಲರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಅಪರಾಧಿ ನಾನಲ್ಲ’ ಚಿತ್ರವು ಜುಲೈ 3ರಂದು ರಾಜ್ಯದಾದ್ಯಂತ ಪ್ರೇಕ್ಷಕರ ಮುಂದೆ ಬರಲಿದೆ.

- Advertisement -

Related news

error: Content is protected !!