Sunday, April 28, 2024
spot_imgspot_img
spot_imgspot_img

ಮಂಗಳೂರು : ಬಿಜೆಪಿ ಗೆಲುವಿನ ಕಾರ್ಯಾಲಯವನ್ನು ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟನೆ

- Advertisement -G L Acharya panikkar
- Advertisement -

ಮಂಗಳೂರು : ಲೋಕಸಭಾ ಚುನಾವಣೆಗಾಗಿ ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಬಿಜೆಪಿಯ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಪ್ರಮುಖರು ಭಾಗಿಯಾದರು.

ಗಣಪತಿ ಹೋಮ ನಡೆಸಿ ಧಾರ್ಮಿಕ ವಿಧಿ ವಿಧಾನ ಸಂಪನ್ನಗೊಳಿಸಲಾಯಿತು. ಬಳಿಕ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸುವ ಮೂಲಕ ಚುನಾವಣಾ ಕಚೇರಿ ಉದ್ಘಾಟನೆ ಮಾಡಿದರು. ಮಾತನಾಡಿದ ಅವರು, ಗಣಪತಿ ಪೂಜೆಯ ಮೂಲಕ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಗೆಲುವಿನ ಕಾರ್ಯಾಲಯವನ್ನು ಈ ಬಾರಿ ಮತ್ತೆ ಉದ್ಘಾಟನೆ ಮಾಡಿದ್ದೇವೆ. ಈ ಬಾರಿ ಮತ್ತೆ ಅಭೂತಪೂರ್ವವಾದ ಗೆಲುವು ಬಿಜೆಪಿಗೆ ಆಗುತ್ತದೆ. ಇಲ್ಲಿ ಬಿಜೆಪಿ ಮತ್ತೆ ಗಟ್ಟಿಯಾದ ಸ್ಥಾನ ಉಳಿಸಿಕೊಳ್ಳುತ್ತದೆ. ಕಳೆದ ಸಾರಿ 2 ಲಕ್ಷದ 73 ಸಾವಿರ ಮತಗಳ ಅಂತರದಿಂದ ಗೆದ್ದಿದೆ. ಈ ಬಾರಿ ಮೂರೂವರೆ ಲಕ್ಷಕ್ಕಿಂತ ಹೆಚ್ಚು ಬಹುಮತದಿಂದ ಈ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದರು. ದೇಶದಲ್ಲಿ 400 ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಬಿಜೆಪಿ ಗೆಲುವು ಸಾಧಿಸಬೇಕು ಎಂದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಲೋಕಸಭಾ ಕ್ಷೇತ್ರ ಬಿಜೆಪಿಯ ಗೆಲುವಾಗಬೇಕು. 2004 ರಿಂದ ಈ ಕಾರ್ಯಾಲಯ ಬಿಜೆಪಿಯ ಗೆಲುವಿನ ಕಾರ್ಯಾಲಯವಾಗಿದೆ. ಯಾವ ಯಾವ ಚುನಾವಣೆಯಲ್ಲಿ ಈ ಕಾರ್ಯಾಲಯ ಬಳಸಿದ್ದೇವೊ ಆ ಎಲ್ಲಾ ಚುನಾವಣೆಯಲ್ಲಿ ನಮಗೆ ಗೆಲುವಾಗಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಹಿನ್ನಡೆಯಾದರೂ ನಮ್ಮ ಜಿಲ್ಲೆಯಲ್ಲಿ ಈ ಕಾರ್ಯಾಲಯ ಮೂಲಕ ಕಾರ್ಯ ಮಾಡಿ ಗೆಲುವು ಸಾಧಿಸಿದ್ದೇವೆ. ಮಹಾನಗರ ಪಾಲಿಕೆಗೆ ಈ ಕಾರ್ಯಾಲಯ ಬಳಕೆ ಮಾಡಿ ಚುನಾವಣೆ ಗೆದ್ದಿದ್ದೇವೆ. ಹಿಂದಿನ ಮೂರು ಲೋಕಸಭಾ ಚುನಾವಣೆಗೆ ಈ ಕಾರ್ಯಾಲಯ ಬಳಕೆ ಮಾಡಿ ಗೆದ್ದಿದ್ದೇವೆ ಎಂದರು. ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಪಕ್ಷದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!