Wednesday, April 24, 2024
spot_imgspot_img
spot_imgspot_img

ಐದು ತಿಂಗಳ ನಂತರ ಮತ್ತೆ ಆರಂಭವಾದ ನಮ್ಮ ಮೆಟ್ರೋ: ಸೆಪ್ಟಂಬರ್ 10 ರಿಂದ ಹಸಿರು ಮಾರ್ಗಕ್ಕೂ ಗ್ರೀನ್ ಸಿಗ್ನಲ್.

- Advertisement -G L Acharya panikkar
- Advertisement -

ಬೆಂಗಳೂರು: ಕೋವಿಡ್ 19  ಕಾರಣದಿಂದ ಐದು ತಿಂಗಳ ಕಾಲ ಸ್ಥಗಿತವಾಗಿದ್ದ ನಮ್ಮ ಮೆಟ್ರೋ ಇಂದಿನಿಂದ ಮತ್ತೆ ಓಡಾಟ ಆರಂಭಿಸಲಿದೆ. ಕೇಂದ್ರ ಸರಕಾರದ ಅನ್​ಲಾಕ್ 4 ನೇ ಮಾರ್ಗಸೂಚಿಯಂತೆ ದೇಶದೆಲ್ಲೆಡೆ ಮೆಟ್ರೋ ಸೇವೆ ಪ್ರಾರಂಭಿಸಲು ಅನುಮತಿ ದೊರೆತಿದ್ದು, ಬೆಂಗಳೂರಿನ ನಮ್ಮ ಮೆಟ್ರೋ ಇಂದು ಮತ್ತೆ ತನ್ನ ಓಡಾಟ ಪ್ರಾರಂಭಿಸಿದೆ.

ಬಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ- ನಾಯಂಡನಹಳ್ಳಿ ಮಾರ್ಗದಲ್ಲಿ ಇಂದಿನಿಂದ ಮೆಟ್ರೋ  ರೈಲು ಸಂಚಾರ ಆರಂಭವಾಗಿದೆ.5 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚಾರ ಮಾಡಲಿವೆ.ನಾಗಸಂದ್ರ- ಯೆಲಚೇನಹಳ್ಳಿ ನಡುವಿನ ಸಂಚಾರ ಬುಧವಾರದಿಂದ ಆರಂಭವಾಗಲಿದೆ.

ಬೆಂಗಳೂರು ಮೆಟ್ರೋ ಸಂಚಾರಕ್ಕೆ ನಿಯಮಗಳು:

  • ಆರೋಗ್ಯ ಸೇತು ಆಪ್ ಇದ್ದರೆ ಮಾತ್ರ ಎಂಟ್ರಿ
  • ಕ್ಯಾಶ್‍ಲೆಸ್ ಸಂಚಾರಕ್ಕೆ ಮಾತ್ರ ಅವಕಾಶ
  • ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಮಾತ್ರ ಮೆಟ್ರೋಗೆ ಎಂಟ್ರಿ
  • ಟೋಕನ್ ಬಳಸಿ ಸಂಚಾರಕ್ಕೆ ಅವಕಾಶ ಇಲ್ಲ
  • ಸ್ಯಾನಿಟೈಸರ್ ಬಳಕೆ, ಉಷ್ಣಾಂಶ ಚೆಕ್ ಆದ್ರೆ ಮಾತ್ರ ಎಂಟ್ರಿ
  • ಸ್ಟೇಷನ್‍ನಲ್ಲಿ ಪ್ರಯಾಣಿಕರ ನಿಲುಗಡೆಗೆ ಬಾಕ್ಸ್.
  • ಪ್ರವೇಶ ದ್ವಾರ, ನಿರ್ಗಮನ, ಪ್ಲಾಟ್ ಫಾರ್ಮ್‌ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
  • ಎಸ್ಕೇಲೇಟರ್ ಬಳಸುವ ಪ್ರಯಾಣಿಕರು ಒಂದು ಮೆಟ್ಟಿಲು ಅಂತರ ಕಾಪಾಡಬೇಕು
  • ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
  • 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
  • 6 ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
  • ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಬೇಕು
  • ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಲ್ಲಿಸಲ್ಲ
  • 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ.
- Advertisement -

Related news

error: Content is protected !!