Sunday, July 26, 2026
spot_imgspot_img
spot_imgspot_img

ಗುಜರಾತ್‌ನ ಕಾಂಡ್ಲಾ ಬಂದರಿಗೆ 46,000 ಟನ್ ಎಲ್‌ಪಿಜಿ ಹೊತ್ತು ತಂದ ನಂದಾದೇವಿ ಹಡಗು

- Advertisement -
- Advertisement -

ಗಾಂಧಿನಗರ: 46,000 ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಕೆಲವೇ ಗಂಟೆಗಳಲ್ಲಿ ಆಗಮಿಸಲಿದ್ದು, ಇದರಿಂದ ಭಾರತದಲ್ಲಿ ತಲೆದೂರಿರುವ ಅಡುಗೆ ಅನಿಲದ ಕೊರತೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ.

ಸೋಮವಾರ (ಮಾ.16) ಶಿವಾಲಿಕ್ ಹಡಗು 46,000 ಟನ್ ಎಲ್‌ಪಿಜಿ ಹೊತ್ತು ಭಾರತಕ್ಕೆ ಬಂದಿತ್ತು. ಎರಡೂ ಹಡಗುಗಳು ಸರ್ಕಾರಿ ಸ್ವಾಮ್ಯದ ಶಿಪ್ಪಿಂಗ್ ಕಾರ್ಪೋರೇಷನ್‌ ಆಫ್ ಇಂಡಿಯಾ ಒಡೆತನದಲ್ಲಿವೆ. ಎರಡು ಹಡಗುಗಳು ತಲಾ 46,000 ಟನ್‌ ಎಲ್‌ಪಿಜಿ ಹೊತ್ತು ತಂದಿವೆ. ಇದರೊಂದಿಗೆ ಮೂರನೇ ಹಡಗು ಸಹ ಇಂದು (ಮಾ.17) ಭಾರತಕ್ಕೆ ಬಂದು ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಯುಎಇಯ ಫುಜೈರಾ ಬಂದರಿನಿಂದ ಹೊರಟಿದ್ದ ಕಚ್ಚಾ ತೈಲ ಟ್ಯಾಂಕರ್ ಜಗ್ ಲಡ್ಕಿ ಇಂದು ಮಧ್ಯಾಹ್ನ ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದ್ದು, ಈ ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತು ತರುತ್ತಿದೆ.

46,000 ಟನ್ ಎಲ್‍ಪಿಜಿಯನ್ನು‌ ಹೊತ್ತು ತಂದಿದ್ದ ಶಿವಾಲಿಕ್ ಹಡಗು, ಮುಂದ್ರಾದಲ್ಲಿ 20,000 ಟನ್ ಎಲ್‍ಪಿಜಿ ಇಳಿಸಲಿದೆ. ಉಳಿದ 26,000 ಟನ್‍ಗಳನ್ನು ನವ ಮಂಗಳೂರು ಬಂದರಿಗೆ ಹೊತ್ತು ತರಲಿದೆ. ಈ ಮೂಲಕ ರಾಜ್ಯಕ್ಕೆ 26,000 ಟನ್‌ ಎಲ್‌ಪಿಜಿ ದೊರೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!