Thursday, April 25, 2024
spot_imgspot_img
spot_imgspot_img

ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಪ್ರವಾಸಿಗರ ಎಂಟ್ರಿ ನಿಷೇಧ!

- Advertisement -G L Acharya panikkar
- Advertisement -

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಪ್ರವಾಸಿಗರ ಎಂಟ್ರಿ ನಿಷೇಧಿಸಲಾಗಿದೆ. ನಿನ್ನೆ ಬೆಳಿಗ್ಗೆ 6 ಗಂಟೆಯಿಂದ ಜನವರಿ 2ರ ಬೆಳಿಗ್ಗೆ 6 ಗಂಟೆಯವರೆಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಡಿಸೆಂಬರ್​​ 31ರ ಸಂಜೆ 6 ಗಂಟೆಯಿಂದ ಜನವರಿ 1 ನೇ ತಾರೀಖು ಬೆಳಿಗ್ಗೆ 6 ಗಂಟೆವರೆಗೂ ಜಿಲ್ಲೆಯಾದ್ಯಂತ ಸೆಕ್ಷನ್​ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಹಿನ್ನೆಲೆ ಸಂಜೆ 6 ಗಂಟೆ ಮೇಲೆ 5ಕ್ಕಿಂತಾ ಹೆಚ್ಚು ಜನ ಗುಂಪಾಗಿ ಓಡಾಡುವಂತಿಲ್ಲ. ಕೊರೊನಾ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದ್ದು, ಪಾನಮತ್ತಾಗಿ ಓಡಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ವರಿಷ್ಠಾಧಿಕಾರಿಗಳು ಚರ್ಚೆ ನಡೆಸಿ ಹೋಟೆಲ್​ ಹಾಗೂ ರೆಸಾರ್ಟ್​ನಲ್ಲಿ ನಡೆಯುವ ಇವೆಂಟ್​ಗಳಿಗೆ ಅನುಮತಿ ನಿರಾಕರಿಸಿದ್ದಾರೆ.

- Advertisement -

Related news

error: Content is protected !!