Wednesday, April 24, 2024
spot_imgspot_img
spot_imgspot_img

ಪ್ರಧಾನಿ ಮೋದಿ ‘ಕೌಶಲ್ಯ’ದ ಮಾತು

- Advertisement -G L Acharya panikkar
- Advertisement -

ನವದೆಹಲಿ: ಕೌಶಲ್ಯ ಭರಿತ ಕೆಲಸ ತುಂಬಾ ಅವಶ್ಯಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವ ಯುವ ಕೌಶಲ್ಯ ದಿನ ಉದ್ದೇಶಿಸಿ ಮಾತನಾಡಿದ ಅವರು, ಯುವಕರು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಒತ್ತು ನೀಡಬೇಕು ಎಂದರು.

ಕೊರೊನಾದಿಂದ ಕೆಲಸದ ರೀತಿ ಬದಲಾಗಿದೆ

ಕೊರೊನಾ ನಾವು ಕೆಲಸ ಮಾಡುವ ರೀತಿಯನ್ನೇ ಬದಲಾಯಿಸಿದೆ.ಕೌಶಲ್ಯ ಭರಿತ ಕೆಲಸ ಹೊಸ ಅನುಭವ ನೀಡುತ್ತದೆ. ಕೌಶಲ್ಯ ಭರಿತ ಕೆಲಸಕ್ಕೆ ಜಗತ್ತಿನಲ್ಲಿ ತುಂಬಾ ಬೆಲೆಯಿದೆ. ಕೌಶಲ್ಯ ಯುವ ಜನತೆಗೆ ಖಜಾನೆ ಇದ್ದಂಗೆ. ಎಲ್ಲ ಕ್ಷೇತ್ರದಲ್ಲೂ ನಮ್ಮ ಯುವಕರು ಸಾಧನೆ ಮಾಡಿದ್ದಾರೆ. ಕೌಶಲ್ಯ ಮನುಷ್ಯನಿಗೆ ಬದುಕುವ ಶಕ್ತಿ ಕೊಡುತ್ತದೆ. ಜ್ಞಾನ ಹಾಗೂ ಕೌಶಲ್ಯದ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಕೊರೊನಾ ಉದ್ಯೋಗಗಳ ಸ್ವರೂಪವನ್ನು ಬದಲಿಸಿದೆ . ಯುವಕರು ಇದಕ್ಕೆ ಶೀಘ್ರವಾಗಿ ಹೊಂದಿಕೊಳ್ಳುತ್ತಿದ್ದಾರೆ, ವ್ಯವಹಾರ ಮತ್ತು ಅದರ ಮಾರುಕಟ್ಟೆ ತ್ವರಿತವಾಗಿ ಬದಲಾಗುತ್ತಿದೆ ಎಂದರು.

ಈ ಸವಾಲಿಗೆ ಉತ್ತರವೆಂದರೆ ಕೌಶಲ್ಯ, ನಾವು ನುರಿತ ಕೆಲಸಗಾರರನ್ನು ನಕ್ಷೆ ಮಾಡಲು ಪೋರ್ಟಲ್ ಅನ್ನು ಪ್ರಾರಂಭಿಸಿದ್ದೇವೆ, ಇದು ಉದ್ಯೋಗದಾತರಿಗೆ ಈ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆ ಮಾಡಲು ಸಹಾಯ ಮಾಡುತ್ತದೆ. ಯಶಸ್ವಿ ವ್ಯಕ್ತಿಯು ಹೊಸ ಕೌಶಲ್ಯಗಳನ್ನು ಕಲಿಯುವುದನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದರು.

- Advertisement -

Related news

error: Content is protected !!