Friday, March 29, 2024
spot_imgspot_img
spot_imgspot_img

ಗುಜರಾತಿನ ಖ್ಯಾತ ನಟ, ರಾಜಕಾರಣಿ ನರೇಶ್‌ ಕನೋಡಿಯಾ ಕೊರೋನಾದಿಂದ ಮೃತ್ಯು

- Advertisement -G L Acharya panikkar
- Advertisement -

ಅಹಮದಾಬಾದ್: ಗುಜರಾತಿನ ಖ್ಯಾತ ನಟ, ರಾಜಕಾರಣಿ ನರೇಶ್‌ ಕನೋಡಿಯಾ(77) ಅವರು ಕೊರೋನಾದಿಂದ ಮಂಗಳವಾರ ಅಸುನೀಗಿದ್ದಾರೆ.


ಎರಡು ದಿನಗಳ ಹಿಂದಷ್ಟೇ ನರೇಶ್ ಅವರ ಹಿರಿಯ ಸಹೋದರ, ಗುಜರಾತಿ ಗಾಯಕ ಮಹೇಶ್‌ ಕನೋಡಿಯಾ ತಮ್ಮ ಗಾಂಧಿನಗರ ನಿವಾಸದಲ್ಲಿ ಮೃತಪಟ್ಟಿದ್ದರು.
ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ನರೇಶ್ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಅ.20 ರಂದು ನರೇಶ್‌ ಅವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದಕ್ಕೂ ಮುನ್ನ ಅವರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೋವಿಡ್‌ನಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನರೇಶ್‌ ಕನೋಡಿಯ ಅವರು 100 ಕ್ಕೂ ಹೆಚ್ಚು ಗುಜರಾತಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 2002 ರಿಂದ 2007ರಲ್ಲಿ ಕರ್ಜಾನ್‌ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು. ‘ಹಿರಿಯ ನಟ ಮತ್ತು ಮಾಜಿ ಶಾಸಕ ನರೇಶ್ ಕನೋಡಿಯಾ ಅವರ ನಿಧನದಿಂದ ಬೇಸರವಾಗಿದೆ. ಮನರಂಜನೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಣೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

- Advertisement -

Related news

error: Content is protected !!