Sunday, May 5, 2024
spot_imgspot_img
spot_imgspot_img

ನಾರ್ಶ ಕಾಲೇಜ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

- Advertisement -G L Acharya panikkar
- Advertisement -

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ, ದಕ್ಷಿಣ ಕನ್ನಡ ಮತ್ತು ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜು ವಿದ್ಯಾಲಯ, ಆಯೋದ್ಯಾ ನಗರ ಪೆರ್ನೆ, ಬಂಟ್ವಾಳ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕೊಳ್ನಾಡು ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜು ನಾರ್ಶ ಮೈದಾನ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಉತ್ತಮ ಆಲ್ರೌಂಡರ್ ಕೌಶೀಲ, ಉತ್ತಮ ಸ್ಮಾಚರ್ ಆಗಿ ಸಂಶೀಲ ಪ್ರಶಸ್ತಿ ಪಡೆದುಕೊಂಡರು. ಕ್ರೀಡಾಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ದೈಹಿಕ ಶಿಕ್ಷಕ ರಫೀಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ತಂಡದ ಮ್ಯಾನೇಜರ್ ಆಗಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ಶಿವರಾಜ್ ಗಟ್ಟಿ ಪೂರ್ಣ ಸಹಕಾರವನ್ನು ನೀಡಿದ್ದಾರೆ. ತಂಡದಲ್ಲಿ ನಾಯಕಿ ಅಫ್ರ , ಸಂಶೀಲ, ಕೌಶೀಲ, ಶಮಿಮಾ, ಶಮನಾಝ್, ತಬ್ಸಿನ, ಶದಿದ, ಮುರ್ಷಿದ, ರೈಫಾನ ಭಾಗವಹಿಸಿದ್ದರು.

ವಿದ್ಯಾಸಂಸ್ಥೆಯ ಗೌರವಾನ್ವಿತ ಪ್ರಾಂಶುಪಾಲ ರೀಟಾ ಡಿಸೋಜ ಹಾಗೂ ಉಪನ್ಯಾಸಕರು ಅಭಿನಂದಿಸಿದರು. ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸತತವಾಗಿ ಹಲವು ವರ್ಷಗಳಿಂದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

- Advertisement -

Related news

error: Content is protected !!