Friday, April 19, 2024
spot_imgspot_img
spot_imgspot_img

ಚಂದ್ರನಂಗಳಕ್ಕೆ ತೆರಳಲಿರೋ NASA ಟೀಂನಲ್ಲಿ ಭಾರತ ಮೂಲದ ಗಗನಯಾತ್ರಿ ರಾಜಾಚಾರಿ

- Advertisement -G L Acharya panikkar
- Advertisement -

ವಾಷಿಂಗ್ಟನ್: 1970ರ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 18 ಗಗನಯಾತ್ರಿಗಳನ್ನ ಚಂದ್ರನ ಅಂಗಳಕ್ಕೆ ಕಳಿಸುತ್ತಿದೆ. ನಾಸಾದ ಆರ್ಟೆಮಿಸ್​ ಯೋಜನೆಯಡಿ ಚಂದ್ರಯಾನಕ್ಕಾಗಿ 9 ಮಹಿಳಾ ಗಗನಯಾತ್ರಿಗಳು ಹಾಗೂ 9 ಪುರುಷ ಗಗನಯಾತ್ರಿಗಳನ್ನ ಆಯ್ಕೆ ಮಾಡಿದೆ. ಅವರಲ್ಲಿ ಒಬ್ಬರು ಭಾರತ ಮೂಲದ ಆಸ್ಟ್ರಾನಾಟ್​ ರಾಜಾಚಾರಿ.

ಈ ವರ್ಷ ಜನವರಿಯಲ್ಲಿ 2 ವರ್ಷಗಳ ಆರಂಭಿಕ ಗಗನಯಾತ್ರಿ ತರಬೇತಿ ಪೂರೈಸಿದ 11 ನಾಸಾ ಪದವೀಧರರ ಪೈಕಿ ರಾಜಾಚಾರಿ ಕೂಡ ಒಬ್ಬರಾಗಿದ್ದಾರೆ. 2017ರಲ್ಲಿ ನಾಸಾ ತನ್ನ ಆರ್ಟಿಮಿಸ್​ ಯೋಜನೆ ಘೋಷಣೆ ಮಾಡಿದ ಬಳಿಕ 18,000 ಅರ್ಜಿದಾರರ ಪೈಕಿ ಇವರನ್ನ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. 41 ವರ್ಷದ ರಾಜಾಚಾರಿ ಅವರನ್ನ 2017ರ ಆಸ್ಟ್ರನಾಟ್​ ಕ್ಯಾಂಡಿಡೇಟ್​ ಕ್ಲಾಸ್​​ಗೆ ನಾಸಾ ಆಯ್ಕೆ ಮಾಡಿತ್ತು. 2017ರ ಆಗಸ್ಟ್​​ನಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾದ ಅವರು, ಆರಂಭಿಕ ಆಸ್ಟ್ರನಾಟ್​ ಕ್ಯಾಂಡಿಡೇಟ್ ತರಬೇತಿ ಮುಗಿಸಿದ್ದು, ಈಗ ಬಾಹ್ಯಾಕಾಶಯಾನದ ಭಾಗವಾಗಲು ಅಣಿಯಾಗಿದ್ದಾರೆ. 

- Advertisement -

Related news

error: Content is protected !!