Monday, July 27, 2026
spot_imgspot_img
spot_imgspot_img

ವಿಟ್ಲ: ನವಭಾರತ ಡ್ರೈವಿಂಗ್ ಸ್ಕೂಲ್ ಲೋಕಾರ್ಪಣೆ- ತರಬೇತಿ ವಾಹನಕ್ಕೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

- Advertisement -
- Advertisement -

ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ನವಭಾರತ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಂಡಿತು.‌

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಮತ್ತು ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ಡ್ರೈವಿಂಗ್ ಸ್ಕೂಲ್ ನ ವಾಹನಕ್ಕೆ ಚಾಲನೆ ನೀಡಿದರು.

ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿ ಮಾತನಾಡಿ ಟ್ರಾಫಿಕ್ ನಿಯಮ ಕಲಿಸುವ‌ ಕೆಲಸ ನಿಮ್ಮದಾಗಲಿ. ಸಂಸ್ಥೆಗೆ ಯಾರೇ ಬಂದರೂ ಟ್ರಾಫಿಕ್ ನಿಯಮಗಳ ಕುರಿತಾಗಿ ಜಾಗೃತಿ ಹುಟ್ಟಿಸುವ ಕೆಲಸ‌ ಸಂಸ್ಥೆಯಿಂದಾಗಲಿ ಎಂದರು.

ವಿಟ್ಲ ಗ್ರಾ.ಪಂ ಮಾಜಿ ಅಧ್ಯಕ್ಷರಾದ ರಮಾನಾಥ ವಿಟ್ಲ, ದೇವಿಪ್ರಸಾದ್ ಶೆಟ್ಟಿ ಬೆಂಜೆಂತಿಮಾರ್, ಸಾಮಾಜಿಕ ಮುಖಂಡ ಶಾಕಿರ್ ಅಳಕೆಮಜಲು, ಸಂಸ್ಥೆಯ ಪಾಲುದಾರರಾದ ನವೀದ್ ವಿಟ್ಲ, ಸುಮಿತ್ ಕಾರ್ಯಾಡಿ, ವಿ ಟಿವಿ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿ ವಿಟ್ಲ, ಪತ್ರಕರ್ತರಾದ ಮೊಹಮ್ಮದ್ ಆಲಿ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ರವಿ ಪ್ರಕಾಶ್, ದಯಾನಂದ ಶೆಟ್ಟಿ ಉಜಿರೆಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಅರುಣ್ ವಿಟ್ಲ, ಕರುಣಾಕರ್ ನಾಯ್ತೊಟ್ಟು, ಶ್ರೀಕೃಷ್ಣ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!