Friday, April 26, 2024
spot_imgspot_img
spot_imgspot_img

ಎಂಡಿಎಂಎ ಜಪ್ತಿ, ನಾಲ್ವರು ಎನ್​​​​​ಸಿಬಿ ಅಧಿಕಾರಿಗಳ ಬಲೆಗೆ .

- Advertisement -G L Acharya panikkar
- Advertisement -

ಬೆಂಗಳೂರು ಮಾದಕ ವಸ್ತು ಖರೀದಿ‌ ಹಾಗೂ‌ ಮಾರಾಟ‌ ಮಾಡುವವರ ವಿರುದ್ಧ ಸಮರ ಸಾರಿರುವ ಕೇಂದ್ರ ಮಾದಕವಸ್ತು ನಿಯಂತ್ರಣ ಮಂಡಳಿಯು ವಿಳಾಸವಿಲ್ಲದೆ ವಿದೇಶಿ ಪೋಸ್ಟ್‌ ಮೂಲಕ ಉಡುಪಿಗೆ ಬಂದಿದ್ದ 750 ಗ್ರಾಂ ತೂಕದ ಎಂಡಿಎಂಎ ಜಪ್ತಿ ಮಾಡಿದ್ದು, ನಾಲ್ವರನ್ನು ಎನ್​​​​​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕೆ.ಪ್ರಮೋದ್, ಡ್ರಗ್ಸ್ ಸೂತ್ರದಾರ ಫಾಹಿಮ್, ಹಶೀರ್ ಮತ್ತು ಎಸ್​​​​​.ಎಸ್.ಶೆಟ್ಟಿ ಬಂಧಿತರಾಗಿದ್ದು, ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ಉಡುಪಿಯ ಮಣಿಪಾಲ ಯುನಿವರ್ಸಿಟಿ ಕಾಲೇಜು, SRM ಯುನಿವರ್ಸಿಟಿ ಚೆನ್ನೈ ವಿದ್ಯಾರ್ಥಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕೇರಳ ಮೂಲದವರಾಗಿದ್ದ ಮಾಸ್ಟರ್ ಮೈಂಡ್ ಫಾಹಿಮ್ ಹಾಗೂ ಪ್ರಮೋದ್, ಆತನ ಸಹಚರರಾಗಿದ್ದ ಕರ್ನಾಟಕದ ಅಬು ಹಾಶಿರ್ ಹಾಗೂ ಸಾಹಿತ್ ಶೆಟ್ಟಿ ಸೇರಿದಂತೆ ಇನ್ನಿತರ ಆರೋಪಿಗಳು ವೆಬ್ ಸಿರೀಸ್ ನೋಡಿ ಮಾದಕವಸ್ತು ಎಂಡಿಎಂಎ ಆರ್ಡರ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದರು.

- Advertisement -

Related news

error: Content is protected !!