Sunday, June 21, 2026
spot_imgspot_img
spot_imgspot_img

ನೆಲ್ಯಾಡಿ: ಮಹಿಳೆ ಜತೆ ಅಸಭ್ಯ ವರ್ತನೆ; ಪ್ರಶ್ನಿಸಲು ಹೋದ ಪತಿ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ

- Advertisement -
- Advertisement -

ನೆಲ್ಯಾಡಿ: ಮಹಿಳೆ ಜೊತೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದು, ವಿಚಾರಿಸಲು ಹೋದ ಮಹಿಳೆಯ ಪತಿಗೆ ತಲವಾರು ತೋರಿಸಿ ಜೀವಬೆದರಿಕೆಯೊಡ್ಡಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಮಹಿಳೆ ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ನಿವಾಸಿ ಡೆಲಿಶಾ ಡೆಸಾ (23) ಎಂಬವರು ಕೆಲಸ ಮುಗಿಸಿ ಬರುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಗಂಡನ ಸ್ನೇಹಿತನಾದ ಲಕ್ಷ್ಮೀನಾರಾಯಣ ಎಂಬಾತ ಡೆಲಿಶಾ ಡೆಸಾ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ವಿಷಯ ತಿಳಿದು ವಿಚಾರಿಸಲು ಹೋದ ಮಹಿಳೆಯ ಪತಿಗೆ ಆರೋಪಿ ತಲವಾರು ತೋರಿಸಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿ, ಹಲ್ಲೆ ನಡೆಸಿದ್ದಾನೆ. ಈ ಪ್ರಕರಣ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!