Tuesday, October 27, 2026
spot_imgspot_img
spot_imgspot_img

ನೆಲ್ಯಾಡಿ: ಗುಜರಿ ಅಂಗಡಿ ಕಳ್ಳತನ; ಕಳವು ತಡೆಯಲು ಯತ್ನಿಸಿದರಿಗೆ ಹಲ್ಲೆ – ಮೌಲ್ಯಯುತ ಸೊತ್ತುಗಳೊಂದಿಗೆ ಪರಾರಿಯಾದ ಖದೀಮರು

- Advertisement -
- Advertisement -
vtv vitla

ನೆಲ್ಯಾಡಿ: ಗುಜರಿ ಅಂಗಡಿಗೆ ನುಗ್ಗಿದ ಕಳ್ಳರ ತಂಡವು 85 ಸಾವಿರಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ನೆಲ್ಯಾಡಿಯ ಹೊಸಮಜಲು ಸೆಂಟರ್ ನಲ್ಲಿ ಕಾರ್ಯಚರಿಸುತ್ತಿರುವ ಜಲಾಲಿಯಾ ಗುಜರಿ ಅಂಗಡಿಗೆ ನುಗ್ಗಿದ ಕಳ್ಳರ ತಂಡ ಅಲ್ಲಿದ್ದ ಮೌಲ್ಯಯುತ ಸೊತ್ತುಗಳನ್ನು ಕಳವುಗೈದಿದ್ದಾರೆ.

ತಡರಾತ್ರಿ 1 ಗಂಟೆಯ ಸುಮಾರಿಗೆ ಕಳ್ಳರ ಗುಂಪೊಂದು ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಂಗಡಿಯ ಮಾಲೀಕ ಹಾಗೂ ಅವರ ಸಂಬಂಧಿಕರಿಗೆ ಕಳ್ಳರ ಗುಂಪು ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಯಿಂದಾಗಿ ಅಂಗಡಿ ಮಾಲೀಕರಿಗೆ ಹಾಗೂ ಅವರ ಸಂಬಂಧಿಕರಿಗೆ ಗಾಯವಾಗಿದೆ.

ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾರದ ಹಿಂದಷ್ಟೇ ಈ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!