- Advertisement -
- Advertisement -



ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದಾಗಲೇ ಇಬ್ಬರು ಕಳ್ಳರನ್ನು ಊರವರು ಹಿಡಿದು, ವಿಚಾರಿಸಿ ಇದೀಗ ಪೋಲೀಸರಿಗೊಪ್ಪಿಸಿರುವ ಘಟನೆ ವರದಿಯಾಗಿದೆ.
ಕನಕಮಜಲು ಗ್ರಾಮದ ನರಿಯೂರು ಸೀತಾರಾಮ ಗೌಡರಿಗೆ ಕಟ್ಟಡದಲ್ಲಿರುವ ಧನಂಜಯ ಎಂಬವರ ಮಾಲಕತ್ವದ ಶ್ರೀ ಗಣೇಶ್ ಸ್ಟೋರ್ ನ ಒಳಗೆ ರಾತ್ರಿ ಸುಮಾರು 3.30 ಕ್ಕೆ ಜೋರು ಶಬ್ದ ಕೇಳುತ್ತಿತ್ತೆಂದೂ, ಇದು ಸೀತಾರಾಮ ಗೌಡರ ಮಗನಿಗೆ ಕೇಳಿ ಅವರು ಅಂಗಡಿ ಬಳಿ ಬಂದು ನೋಡಿದಾಗ, ಎದುರೊಂದು ರಿಟ್ಸ್ ಕಾರು ಇತ್ತೆಂದೂ, ಅಂಗಡಿ ಶೆಟರ್ ಒಡೆದಿತ್ತೆನ್ನಲಾಗಿದೆ. ತಕ್ಷಣ ಅವರು ಮನೆಯವರಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿಸಿದರು.
ಅಂಗಡಿಯೆದುರು ಜನ ಸೇರಿ ಅಂಗಡಿಯ ಎದುರುನಿಂತಿದ್ದ ಹಾಗೂ ಅಂಗಡಿಯೊಳಗೆ ಕಳವು ನಡೆಸುತ್ತಿದ್ದ ಕಳ್ಳನನ್ನು ಹಿಡಿದುಕೊಂಡರು.ವಿಚಾರಿಸಿದಾಗಬಂಟ್ವಾಳದ ಸಜೀಪ ಮೂಲದ ಸುಹೈಲ್ ಹಾಗು ರಿಯಾಜ್ ಎಂದು ಪರಿಚಯ ಹೇಳಿದರೆನ್ನಲಾಗಿದೆ. ಅಲ್ಲದೆ ಬಾಡಿಗೆ ಕಾರಿನಲ್ಲಿ ಅವರು ಬಂದಿದ್ದರೆಂದು ತಿಳಿದುಬಂದಿದೆ.
- Advertisement -








