Saturday, October 24, 2026
spot_imgspot_img
spot_imgspot_img

ಭಾರತಕ್ಕೆ ಕಾಲಿಟ್ಟ ಹೊಸ ಕೊರೋನಾ ವೈರಸ್.

- Advertisement -
- Advertisement -

ನವದೆಹಲಿ : ಹೊಸ ಕೊರೋನಾ ವೈರಸ್ ಸೋಂಕಿನ ಅಲೆಗೆ ಇಡೀ ವಿಶ್ವವೇ ಅಲರ್ಟ್ ಆಗಿದೆ. ಈಗ ಯುಕೆ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೆಹಲಿಯಲ್ಲಿ ಐವರಿಗೆ, ಚೆನ್ನೈನಲ್ಲಿ ಒಬ್ಬರಿಗೂ ಹೊಸ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದಂತ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ.

ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣಕ್ಕೆ ಇಂಗ್ಲೆಂಡ್ ನಿಂದ ಆಗಮಿಸಿದ್ದಂತ ವ್ಯಕ್ತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೂ ಹೊಸ ಮಾದರಿಯ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

- Advertisement -

Related news

error: Content is protected !!