Thursday, July 23, 2026
spot_imgspot_img
spot_imgspot_img

ನವದೆಹಲಿ: ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭ

- Advertisement -
- Advertisement -

ನವದೆಹಲಿ: ದೇಶದ ಮೊದಲ ಬುಲೆಟ್‌ ರೈಲು 2027 ರ ಆಗಸ್ಟ್‌ 15 ರಂದು ಸಂಚಾರ ಪ್ರಾರಂಭಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಮೊದಲು ಸೂರತ್‌ನಿಂದ ಬಿಲಿಮೋರಾವರೆಗೆ ತೆರೆಯಲಾಗುತ್ತದೆ. ನಂತರ ವಾಪಿಯಿಂದ ಸೂರತ್‌ವರೆಗೆ ತೆರೆಯಲಾಗುವುದು. ಹಾಗೆ ನಂತರದ ಹಂತದಲ್ಲಿ ಅಹಮದಾಬಾದ್, ಥಾಣೆ, ಕೊನೆಯ ಹಂತದಲ್ಲಿ ಮುಂಬೈನಿಂದ ಅಹಮದಾಬಾದ್‌ವರೆಗೆ ಸಂಚರಿಸಲಿದೆ ಎಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು . ಈ ಸಂದರ್ಭದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಗುವಾಹಟಿ-ಕೋಲ್ಕತ್ತಾ ಮಾರ್ಗದಲ್ಲಿ ಸಂಚರಿಸಲಿದೆ. ಸ್ಥಳೀಯವಾಗಿ ನಿರ್ಮಿಸಲಾದ ವಂದೇ ಭಾರತ್ ಸ್ಲೀಪರ್ ರೈಲಿನ ಅಂತಿಮ ಹೈಸ್ಪೀಡ್ ಪರೀಕ್ಷಾರ್ಥ ಸಂಚಾರವು ಇತ್ತೀಚೆಗೆ ಕೋಟಾ-ನಾಗ್ಡಾ ವಿಭಾಗದಲ್ಲಿ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಸಮಯದಲ್ಲಿ ರೈಲು ಗಂಟೆಗೆ 180 ಕಿ.ಮೀ ವೇಗವನ್ನು ತಲುಪಿತು ಎಂದು ಹೇಳಿದರು.

- Advertisement -

Related news

error: Content is protected !!