- Advertisement -
- Advertisement -



ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಭತ್ತನೇ ಬಜೆಟ್ ಮಂಡನೆ ಮಾಡಿದ್ದು, ಮಂಡನೆಯಪ್ರಮುಖ ಅಂಶಗಳು ಈ ಕೆಳಗಿನಂತಿವೆ:
- ಆರೋಗ್ಯ ಕ್ಷೇತ್ರಕ್ಕೆ ಬಯೋ ಫಾರ್ಮಾ ಶಕ್ತಿ ಯೋಜನೆ
- 550ಕ್ಕೂ ಹೆಚ್ಚು ಸುಧಾರಣಾ ಕ್ರಮ
- ದೇಶವನ್ನು ಔಷಧ ತಯಾರಿಕಾ ಹಬ್ ಮಾಡಲು ಕ್ರಮ
- ಬಯೋ ಫಾರ್ಮಾ ಯೋಜನೆಗೆ 1 ಸಾವಿರ ಕೋಟಿ ಮೀಸಲು
- ರೇರ್ ಅರ್ಥ್ ಗಣಿಗಾರಿಕೆಗೆ ಪ್ರಾಶಸ್ತ್ರ
- ವಿರಳ ಲೋಹಗಳ ಸಂಗ್ರಹಕ್ಕಾಗಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಕಾರಿಡಾರ್
- ಸೆಮಿಕಂಡಕ್ಟರ್ ಮಿಷನ್ 2.0 ಯೋಜನೆ : 40 ಕೋಟಿ ಮೀಸಲು
- ಟೆಕ್ಸ್ ಟೈಲ್ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ನೀತಿ ಘೋಷಣೆ
- ಕಂಟೈನರ್ ಯೋಜನೆಗೆ 10 ಸಾವಿರ ಕೋಟಿ ಮೀಸಲು
- ಖಾದಿ ಗ್ರಾಮೋದ್ಯೋಗ ಯೋಜನೆ
- ಸಣ್ಣ ಕೈಗಾರಿಕೆಗೆ 10 ಸಾವಿರ ಕೋಟಿ ಮೀಸಲು
- ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ 2 ಸಾವಿರ ಕೋಟಿ ಫಂಡ್
- 2026 – 27ರ ಬಂಡವಾಳ ವೆಚ್ಚ 12.2 ಕೋಟಿ ಕೋಟಿಗೆ ಏರಿಕೆ
- ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲಮಾರ್ಗ ನಿರ್ಮಾಣ
- 2-3ನೇ ಹಂತದ ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ
- ಧಾರ್ಮಿಕ ಹಿನ್ನೆಲೆಯುಳ್ಳ ನಗರಗಳ ಅಭಿವೃದ್ಧಿಗೆ ಆದ್ಯತೆ
- ನಗರಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲು
- ಬೆಂಗಳೂರು – ಹೈದರಾಬಾದ್, ಬೆಂಗಳೂರು – ಚೆನ್ನೈ ಹೈಸ್ಪೀಡ್ ರೈಲು
- ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಆದ್ಯತೆ
- ವಿದ್ಯೆಯಿಂದ ಉದ್ಯೋಗ ಸೃಷ್ಟಿಗಾಗಿ ವಿಶೇಷ ಸಮಿತಿ ರಚನೆ
- ಖಾಸಗಿ ವಲಯದ ಜೊತೆ ಸೇರಿ ದೇಶದಾದ್ಯಂತ 5 ಮೆಡಿಕಲ್ ಹಬ್ ನಿರ್ಮಾಣ.
- ಮೆಡಿಕಲ್ ಟೂರಿಸಂ ಯೋಜನೆ ಉತ್ತೇಜನಕ್ಕೆ ಕ್ರಮ
- ಆಯುರ್ವೇದಕ್ಕೆ ಹೆಚ್ಚಿನ ಒತ್ತು. 3 ಸಂಸ್ಥೆಗಳ ನಿರ್ಮಾಣ, ಆಯುಷ್ ಫಾರ್ಮಸಿಗಳ ಅಭಿವೃದ್ಧಿ, ಮೆಸಿನ್ ಸೆಂಟರ್ -ರಿಸರ್ಚ್ ಸೆಂಟರ್ ಗಳ ನಿರ್ಮಾಣಕ್ಕೆ ಒತ್ತು
- ಮುಂಬೈಯಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಹಾಸ್ಪಿಟಲಿಟಿ
- ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ : ಜಾಗತಿಕವಾಗಿ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ತರಬೇತಿ, ಖೇಲೋ ಇಂಡಿಯಾ ಮಿಷನ್ ಯೋಜನೆ
- ಕರ್ನಾಟಕ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ
- ಈಶಾನ್ಯ ಭಾರತದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿಗೆ ಅಗತ್ಯ ಕ್ರಮ
- ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು
- ತೆಂಗಿನಕಾಯಿ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಗಾಗಿ ಆದ್ಯತೆ
- ಹೆಚ್ಚು ಇಳುವರಿಗಾಗಿ ತಳಿಗಳ ಅಭಿವೃದ್ಧಿ
- ತೆಂಗಿನ ಕಾಯಿ, ಶ್ರೀಗಂಧ, ಗೋಡಂಬಿ ಬೆಳೆಗಳಿಗೆ ಪ್ರೋತ್ಸಾಹ
- ಕೃಷಿ ಉತ್ಪಾದನೆ ವೃದ್ಧಿಗಾಗಿ ಭಾರತ್ ವಿಸ್ತಾರ್ ಯೋಜನೆ
- ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಮತ್ತಷ್ಟು ಆದ್ಯತೆ
- ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗೆ ವಿಶೇಷ ಸಹಾಯಧನ
- ಮಹಿಳೆಯರಿಗೆ She Mart ಯೋಜನೆ
- ದಿವ್ಯಾಂಗರಿಗಾಗಿ ವಿಶೇಷ ಯೋಜನೆ ಘೋಷಿಸಿದ ಕೇಂದ್ರ : ಜನ ಕೌಶಲ್ಯ ಯೋಜನೆ
- ಪ್ರಮುಖ ನಗರಗಳಿಗೆ 4000 ಎಲೆಕ್ನಿಕ್ ಬಸ್‌ಗಳ ವಿತರಣೆ
- ರಾಂಚಿ, ತೇಜ್ ಪುರದಲ್ಲಿ ಹೊಸ ನಿಮ್ಹಾನ್ಸ್ ಆಸ್ಪತ್ರೆಗೆ ಘೋಷಣೆ
- 16 ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ಅನುದಾನ
- ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.41 ಲಕ್ಷ ಕೋಟಿ
- ಹೊಸ ಆದಾಯ ತೆರಿಗೆ ಕಾನೂನು ಘೋಷಣೆ
- ಅಪಘಾತ ವಿಮೆ ಹಣಕ್ಕೆ ತೆರಿಗೆ ಇಲ್ಲ
- ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ನೀತಿ ಘೋಷಣೆ
- ಎಪ್ರಿಲ್‌ನಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ
- ಮಾರ್ಚ್ 31ರ ವರೆಗೆ ತೆರಿಗೆ ಸಲ್ಲಿಸಲು ಅವಕಾಶ
- ವಿದೇಶದಲ್ಲಿರುವ ಆಸ್ತಿ ಘೋಷಣೆಗೆ 6 ತಿಂಗಳ ಕಾಲಾವಕಾಶ
- ಆರೋಗ್ಯ ಮತ್ತು ವಿದ್ಯಾಭ್ಯಾಸ ಟಿಡಿಎಸ್ ಶೇ.5 ರಿಂದ ಶೇ.2ಕ್ಕೆ ಇಳಿಕೆ
- ವಿದೇಶ ಯಾತ್ರೆಗಳ ಟಿಸಿಎಸ್ ಶೇ.2ರಷ್ಟು ಕಡಿತ
- ಹೊಸದಾಗಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಟ್ಯಾಕ್ಸ್ ಹಾಲಿ ಡೇ
- ಡೇಟಾ ಸರ್ವೀಸ್ ಸೆಂಟರ್ ಕಂಪೆನಿಗಳಿಗಳಿಗೆ ಟ್ಯಾಕ್ಸ್ ವಿನಾಯಿತಿ
- ತೆರಿಗೆ ಸಲ್ಲಿಕೆ ತಪ್ಪಿದ್ದಲ್ಲಿ ಇನ್ಮುಂದೆ ಶಿಕ್ಷೆಯಿಲ್ಲ, ಬದಲಿಗೆ ದಂಡ
- ಶೇ.10 ರಷ್ಟು ದಂಡ ವಿಧಿಸುವ ಬಗ್ಗೆ ಪ್ರಸ್ತಾಪ
- ವಿಮಾನಗಳ ಬಿಡಿಭಾಗಗಳ ಆಮದು ಸುಂಕ ಇಳಿಕೆ
- ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ
- ಮದ್ಯದ ಬೆಲೆಯಲ್ಲಿ ಏರಿಕೆ, ಸಿಗರೇಟ್ ಮೇಲಿನ ಸುಂಕ ಏರಿಕೆ
- ಅಣುವಿದ್ಯುತ್ ಸ್ಥಾವರ ಪರಿಕರಗಳ ಆಮದು ಸುಂಕ ಇಳಿಕೆ
- 17 ಕ್ಯಾನ್ಸರ್ ಔಷಧಗಳಿಗೆ ತೆರಿಗೆ ವಿನಾಯಿತಿ
- ಸೋಲಾರ್ ಬಿಡಿಭಾಗಗಳ ದರ ಇಳಿಕೆ
- Advertisement -








