Tuesday, April 30, 2024
spot_imgspot_img
spot_imgspot_img

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ಉನ್ನತ ಮಟ್ಟದ ಸಭೆ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಭಾಗಿ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ 2020 ಜಾರಿ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು.

ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ, ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ‘ಶಾಲಾ ಶಿಕ್ಷಣ ವಲಯದಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲು ಈ ಯೋಜನೆಯನ್ನು ಮಾರ್ಗದರ್ಶಕವನ್ನಾಗಿ ಬಳಸಿಕೊಳ್ಳಬೇಕು.

ನೂತನ ಶಿಕ್ಷಣ ನೀತಿಯಂತೆ ಈ ಯೋಜನೆ ಕೂಡ ಸಂವಾದಾತ್ಮಕ, ಹೊಂದಿಕೊಳ್ಳುವ ಮತ್ತು ಎಲ್ಲವನ್ನೂ ಒಳಗೊಂಡಿದೆ ಎಂದು ಅವರು ಹೇಳಿದರು.

ಸಾರ್ಥಕ್ಯೂನಲ್ಲಿ ಪ್ರಮುಖವಾಗಿ ಗುರಿಗಳು, ಫಲಿತಾಂಶ ಮತ್ತು ಸಮಯದ ಚೌಕಟ್ಟುಗಳನ್ನು ವ್ಯಾಖ್ಯಾನಿಸಲಾಗಿದ್ದು, ಅಂದರೆ ಅದನ್ನು ಎನ್ಇಪಿಯ ಶಿಫಾರಸ್ಸುಗಳ ಜೊತೆ ಜೋಡಣೆ ಮಾಡಲಾಗಿದ್ದು, 297 ಕಾರ್ಯಗಳೊಂದಿಗೆ, ಜವಾಬ್ದಾರಿಯುತ ಸಂಸ್ಥೆಗಳೂ ಸೇರಿ 304 ಫಲಿತಾಂಶಗಳೊಂದಿಗೆ ಬೆಸೆಯಲಾಗಿದೆ.

ಯಾವ ವಿಧದಲ್ಲಿ ಉದ್ದೇಶಿತ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಪ್ರಯತ್ನಗಳನ್ನು ಮಾಡಲಾಗಿದೆ. ಅದರಿಂದಾಗಿ ಹೊಸ ವ್ಯವಸ್ಥೆಯನ್ನು ಸೃಷ್ಟಿಸುವ ಬದಲು ಹಾಲಿ ಇರುವ ವ್ಯವಸ್ಥೆಯಲ್ಲೇ ಅವುಗಳನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ.

ಹಾಗಾಗಿ ಸಾರ್ಥಕ್ಯೂ ನೀತಿಯ ಉದ್ದೇಶ ಮತ್ತು ಸ್ಫೂರ್ತಿಯ ಬಗ್ಗೆ ನೋಡಿಕೊಳ್ಳಲಿದೆ ಮತ್ತು ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಸಾರ್ಥಕ್ಯೂ ಬದಲಾಗುತ್ತಿರುವ ಮತ್ತು ಕಾರ್ಯ ವಿಧಾನ ದಾಖಲೆಯನ್ನಾಗಿ ಸಿದ್ಧಪಡಿಸಲಾಗಿದ್ದು ಮತ್ತು ಅದು ವಿಸ್ತೃತವಾಗಿ ಸಲಹಾತ್ಮಕ ಮತ್ತು ಸೂಚಕ ಸ್ವರೂಪವನ್ನು ಹೊಂದಿದೆ. ಅದನ್ನು ಭಾಗಿದಾರರಿಂದ ಲಭ್ಯವಾಗುವ ಮಾಹಿತಿ/ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದರು.

2020ರ ಜುಲೈ 20ರಂದು ಹೊರಡಿಸಲಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) 2020ಯ ಗುರಿ ಮತ್ತು ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕಾರ್ಯದಲ್ಲಿ ನೆರವು ನೀಡಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮಗ್ರ ಪ್ರಗತಿ(ಸಾರ್ಥಕ್ಯೂ) ಶಾಲಾ ಶಿಕ್ಷಣ ಸಲಹಾತ್ಮಕ ಅನುಷ್ಠಾನ ಯೋಜನೆಯನ್ನು ಅಭಿವೃದ್ಧಿಪಡಿಸಿದೆ.

ಈ ಅನುಷ್ಠಾನ ಯೋಜನೆಯನ್ನು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬಿಡುಗಡೆ ಮಾಡಿದರು. ಭಾರತದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಇದನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ಸ್ವರೂಪವನ್ನು ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ.

ಸಾರ್ಥಕ್ಯೂ ಅನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸ್ವಾಯತ್ತ ಸಂಸ್ಥೆಗಳ ಜೊತೆ ವ್ಯಾಪಕ ಮತ್ತು ವಿಸ್ತೃತ ಸಮಾಲೋಚನೆ ಪ್ರಕ್ರಿಯೆ ಬಳಿಕ ಅಭಿವೃದ್ಧಿಪಡಿಸಲಾಗಿದ್ದು, ಅದಕ್ಕೆ ಎಲ್ಲ ಭಾಗೀದಾರರಿಂದ ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಅವರುಗಳಿಂದ ಸುಮಾರು 7177 ಸಲಹೆ ಅಥವಾ ಮಾಹಿತಿಗಳನ್ನು ಸ್ವೀಕರಿಸಲಾಗಿತ್ತು.

ಎನ್ಇಪಿ 2020 ನಾನಾ ಶಿಫಾರಸ್ಸುಗಳ ಕುರಿತು ಚರ್ಚಿಸಲು ಮತ್ತು ಅವುಗಳ ಅನುಷ್ಠಾನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ವಿಶೇಷವಾಗಿ ಶಿಕ್ಷಕರ ಉತ್ಸವ “ಶಿಕ್ಷಕ ಪರ್ವ”ವನ್ನು 2020ರ ಸೆಪ್ಟೆಂಬರ್ 8 ರಿಂದ 25ರ ವರೆಗೆ ಆಯೋಜಿಸಲಾಗಿತ್ತು. ಅದರಲ್ಲಿ ಸುಮಾರು 15 ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿತ್ತು.

driving
- Advertisement -

Related news

error: Content is protected !!