Thursday, April 25, 2024
spot_imgspot_img
spot_imgspot_img

ಉಡುಪಿಯಲ್ಲೊಂದು ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುವಂತೆ ABVP ಆಗ್ರಹ

- Advertisement -G L Acharya panikkar
- Advertisement -

ಉಡುಪಿ: ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿಗೊಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯತೆಯನ್ನು ಮನಗೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ ಹಲವು ವರ್ಷಗಳಿಂದ ಕಾಲೇಜು ತೆರೆಯಬೇಕೆಂದು ಒತ್ತಾಯಿಸುತ್ತಾ ಬಂದಿದೆ.

ಕಳೆದ ಬಾರಿ ಸಂಸದರಿ0ದ ಉತ್ತಮ ಪ್ರತಿಕ್ರಿಯೆ ಬಂದಿದ್ದರು ಭರವಸೆ ಈಡೇರಲಿಲ್ಲ. ಶೀಘ್ರವೇ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುವಂತೆ ಶಾಸಕರ ಬಳಿ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.


ಮನವಿಗೆ ಉತ್ತಮವಾಗಿ ಸ್ಪಂದಿಸಿದ ಶಾಸಕರು ಪಿಪಿಪಿ ಮಾಡೆಲ್‌ನ ಅಡಿಯಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ಅವಕಾಶವಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಹಾಗೆಯೆ ಸರ್ಕಾರಿ ನರ್ಸಿಂಗ್ ಕಾಲೇಜನ್ನೂ ಉಡುಪಿಯಲ್ಲಿ ತೆರೆಯುವುದಕ್ಕೆ ತಮ್ಮ ಪ್ರಾಮಾಣಿಕ ಪ್ರಯತ್ನಪಡುವುದಾಗಿ ಶಾಸಕರು ಆಶ್ವಾಸನೆ ನೀಡಿದರು.


ಈ ಸಂದರ್ಭದಲ್ಲಿ ಎಬಿವಿಪಿ ಹಿರಿಯ ಕಾರ್ಯಕರ್ತ ಡಾ. ಶಿವಾನಂದ ನಾಯಕ್ , ನಗರ ಕಾರ್ಯದರ್ಶಿ ಸುಮುಖ ಭಟ್ ಸಹಕಾರ್ಯದರ್ಶಿ ಆಕಾಶ್, ವಿದ್ಯಾರ್ಥಿ ಪ್ರಮುಖರಾದ ವಿಕಾಸ್, ಚಿನ್ಮಯ ಹೆಗ್ಡೆ, ಗಿರೀಶ್ ಉಪಸ್ಥಿತರಿದ್ದರು.

- Advertisement -

Related news

error: Content is protected !!