Tuesday, May 7, 2024
spot_imgspot_img
spot_imgspot_img

ಗೋವು ಸಮ್ಮೇಳನದಲ್ಲಿ ಮುಸ್ಲಿಂ ವ್ಯಾಪರಿ ಯಾಕೆ ಬೇಕು.!? ಮುಸ್ಲಿಂ ವ್ಯಾಪಾರಿಗಳ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

- Advertisement -G L Acharya panikkar
- Advertisement -

ಈಗಾಗಲೇ ಕರಾವಳಿಯಿಂದ ಪ್ರಾರಂಭವಾದ ಮುಸ್ಲಿಂ ವ್ಯಾಪಾರಿಗಳ ನಿಷೇಧ ಅಭಿಯಾನ ಇಡೀ ರಾಜ್ಯಕ್ಕೆ ಹಬ್ಬಲು ಪ್ರಾರಂಭವಾಗಿದೆ. ಇದೀಗ ಕೊಡಗು ಜಿಲ್ಲೆಗೂ ವಿಸ್ತರಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಇದ್ದ ಭಜರಂಗದಳದ ಯುವಕರು ಮುಸ್ಲಿಂ ಸಮುದಾಯದವರು ವ್ಯಾಪಾರಕ್ಕೆ ಹಾಕಿದ ಅಂಗಡಿ ಖಾಲಿ ಮಾಡಿಸಿದ್ದಾರೆ.

ಮಕ್ಕಳ ಆಟಿಕೆ ವಸ್ತು, ಕಬ್ಬಿನ ಜ್ಯೂಸ್, ತಿಂಡಿ ತಿನಿಸುಗಳ ಮಳಿಗೆಯನ್ನು ಮುಸ್ಲಿಂ ಸಮುದಾಯದ ವರ್ತಕರು ಹಾಕಿದ್ದರು. ‘ಗೋವು ಹತ್ಯೆ ಮಾಡುವರು, ಗೋವು ಸಮ್ಮೇಳನಕ್ಕೆ ಏಕೆ ಬರಬೇಕು. ಅವರಿಗೆ ಅವಕಾಶ ನೀಡುವುದಿಲ್ಲ’ ಎಂದು ಕಾರ್ಯಕತರು ಆಕ್ರೋಶ ಹೊರಹಾಕಿದರು. ‘ಹಿಂದೂಗಳು ನಡೆಸುವ ಜಾತ್ರೆಯ ವೇಳೆ ಮುಸ್ಲಿಂ ವರ್ತಕರಿಗೆ ಅವಕಾಶ ನೀಡುವುದಿಲ್ಲ. ಬೇಕಿದ್ದರೆ ಅವರ ಧಾರ್ಮಿಕ ಸ್ಥಳಗಳ ಬಳಿ ವ್ಯಾಪಾರ ಮಾಡಿಕೊಳ್ಳಲಿ’ ಎಂದು ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜೀವನ್‌ ಆಗ್ರಹಿಸಿದರು.

- Advertisement -

Related news

error: Content is protected !!