Tuesday, June 23, 2026
spot_imgspot_img
spot_imgspot_img

ಹೊಸ ಹೆಸರಿನಲ್ಲಿ ಭಾರತಕ್ಕೆ ಪಬ್​​ಜಿ ರೀಎಂಟ್ರಿ, ಮೇ 18 ರಿಂದ ನೋಂದಣಿ

- Advertisement -
- Advertisement -

ನವದೆಹಲಿ: ಯುವ ಜನತೆಗೆ ಅಡಿಕ್ಷನ್​​​​ ಉಂಟು ಮಾಡಿದ್ದ ಫೇಮಸ್​ ಗೇಮಿಂಗ್ ಅಪ್ಲಿಕೇಷನ್ ಪಬ್ ಜಿ ಮತ್ತೆ ಭಾರತಕ್ಕೆ ಎಂಟ್ರಿಕೊಡಲು ಸಿದ್ಧವಾಗಿದೆ.

ಗೇಮ್ ಡೆವಲಪರ್ ಕಂಪನಿ ಕ್ರಾಫ್ಟನ್, ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಭಾರತದಲ್ಲಿ ಪಬ್ ಜಿ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು.

ಈಗ ಪಬ್ ಜಿಗಾಗಿ ಕಾಯುತ್ತಿರುವ ಯುವಕರಿಗೆ ಮೇ 18 ರಂದು ನೋಂದಣಿಗೆ ಲಭ್ಯವಾಗಲಿದೆ ಅಂತ ಸಂಸ್ಥೆ ತಿಳಿಸಿದೆ. ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಬಳಕೆದಾರರು ಆಟವನ್ನು ಮೊದಲೇ ನೋಂದಾಯಿಸಿಕೊಳ್ಳಬಹುದು ಎಂದು ಪಬ್ ಜಿ ಸಂಸ್ಥೆ ಹೇಳಿದೆ.

- Advertisement -

Related news

error: Content is protected !!