Monday, April 29, 2024
spot_imgspot_img
spot_imgspot_img

ಕೊರೊನಾದ ನಡುವೆಯೂ ಐಪಿಎಲ್ ಅಬ್ಬರ

- Advertisement -G L Acharya panikkar
- Advertisement -

ಅಬ್ಬಾ..!! ಕೊನೆಗೂ ಬಂದೇಬಿಟ್ಟಿತು ಐಪಿಎಲ್. ಎಲ್ಲರ ಸ್ಟೇಟಸ್ ನಲ್ಲೂ ಇದರದ್ದೇ ಹವಾ.. ಕೆಲವರು ಆರ್ ಸಿ ಬಿ ಅಭಿಮಾನಿಗಳು, ಇನ್ನು ಕೆಲವರು ಸಿ ಎಸ್ ಕೆ, ಮತ್ತೆ ಕೆಲವರು ಮುಂಬೈ ಇಂಡಿಯನ್ಸ್, ಪಂಜಾಬ್ ಹೀಗೆ… ಮಹಾಮಾರಿ ಕೊರೊನಾದ ನಡುವೆಯೂ ಜನಗಳು ಈ ಅದ್ಭುತ ಕ್ಷಣಕ್ಕಾಗಿ ಕಾಯುತ್ತಿದ್ದರು…ಮತ್ತಷ್ಟು ಸಂಭ್ರಮ, ಮತ್ತಷ್ಟು ಖುಷಿ.. ಸಾವಿರಾರು ಅಭಿಮಾನಿಗಳು, ನೂರಾರು ಕನಸುಗಳು.. ಸಿಕ್ಸ್, ಫೋರ್ ಗಳ ಹೊಡೆತ, ವಿಕೆಟ್ ಬಿದ್ದಾಗ ಗೆಲ್ಲುತ್ತೇವೆಂಬ ಸಂತಸ.. ಅದೇ ನಾಟ್ ಔಟ್ ಎಂದಾಗ ಸೋಲುತ್ತೇವೆಂಬ ಭಯ.. ತಮ್ಮ ತಂಡದ ಹೆಸರನ್ನು ಜೋರಾಗಿ ಕೂಗುವ ಹುರುಪು, ಸಾವಿರಾರು ಬೆಟ್ಟಿಂಗ್..


ಯಪ್ಪಾ..!!ಎಷ್ಟೇ ಸಲ ಸೋತರು ಕನ್ನಡಿಗರು ಬಿಟ್ಟು ಕೊಡದ ತಂಡ ಆರ್ ಸಿ ಬಿ. “RCB is not just our team.. It’s our emotion.. ” ಗೆದ್ದೇ ಗೆಲ್ಲುತ್ತೇವೆಂಬ ಭರವಸೆ..ಕನಾ೯ಟಕ ಮಾತ್ರವಲ್ಲದೆ ಹೊರಗಿನ ರಾಜ್ಯದಲ್ಲೂ ಆರ್ ಸಿ ಬಿ ಅಭಿಮಾನಿಗಳು ಇರುವುದು ಕನ್ನಡಿಗರಿಗೊಂದು ಹೆಮ್ಮೆ.

ಹಾಗೆಯೇ ಈ ತಂಡಕ್ಕಾಗಿ ಹೊಸ ಹೊಸ ಹಾಡುಗಳು ಕೂಡ ರೂಪುಗೊಳ್ಳುತ್ತಿರುವುದು ವಿಶೇಷ. ಸುಮಾರು ಆಲ್ಬಮ್ ಸಾಂಗ್ ಕೂಡ ಈಗಾಗಲೇ ಬಿಡುಗಡೆಗೊಂಡಿದೆ. ಹಾಗೆಯೇ CR Creation ತಂಡ ಕೂಡ “RCB the 12 th Man ” ಎಂಬ Rap songನ್ನು ಇದೇ 20 ರಂದು ಬಿಡುಗಡೆಗೊಳಿಸಲಿದ್ದಾರೆ.


ಚರಣ್ ಉಪ್ಪಳಿಗೆ ಇವರ ನಿದೇ೯ಶನದಲ್ಲಿ, ಸ್ವತಃ ಇವರೇ ಹಾಡಿರುವ,ಅಕ್ಷಯ್ ಕುಮಾರ್ ಇವರ ಸಾಹಿತ್ಯ ರಚನೆಯಲ್ಲಿ,ಸಾಕಷ್ಟು ನಿರೀಕ್ಷೆಯೊಂದಿಗೆ ಈ ತಂಡ ಸಜ್ಜಾಗಿ ನಿಂತಿದೆ. ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ, ಪ್ರೋತ್ಸಾಹಿಸುತ್ತಿರುವ ಈ ತಂಡ , ನಿಮ್ಮ ಮುಂದೆ Rap song ಮೂಲಕ ಕಾಣಿಸಿಕೊಳ್ಳಲಿದ್ದಾರೆ.
ಮತ್ತಷ್ಟು ವಿಶ್ವಾಸದೊಂದಿಗೆ ” THE DREAM THAT AWAITS”

                                 ✍ ತನುಶ್ರೀ ಬೆಳ್ಳಾರೆ
- Advertisement -

Related news

error: Content is protected !!