



ಕೊಡ್ಮಾನ್ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ, ಸಾಂಸ್ಕೃತಿಕ ವೈಭವ, ಸಮಾರೋಪ ಸಮಾರಂಭ
ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಸಾರಥ್ಯದಲ್ಲಿ ಸ್ವಸ್ತಿಕ್ ಕಲೋತ್ಸವ 2024 ಕಾರ್ಯಕ್ರಮ ವಿಠಲ ಪದವಿ ಪೂರ್ವ ಕಾಲೇಜಿನ ಕೊಡ್ಮಾನ್ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ಫೆ. 24& 25 ರಂದು ಬಹಳ ಅದ್ದೂರಿಯಾಗಿ ನಡೆಯಿತು. ವಿವಿಧ ಸಾಂಸ್ಕೃತಿಕ ಸಭಾ ಕಾರ್ಯಕ್ರಮ, ಬೃಹತ್ ಆಹಾರ ಮೇಳ ಮತ್ತು ಸಸ್ಯಮೇಳ, ಅಂತರ್ ರಾಜ್ಯ ಮಹಿಳಾ ಮತ್ತು ಪುರುಷರ ಕಬಡ್ಡಿ ಪಂದ್ಯಾಟ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸ್ವಸ್ತಿಕ್ ಕಲೋತ್ಸವದ ಮೆರುಗನ್ನು ಹೆಚ್ಚಿಸಿದೆ.
ವಿಟ್ಲ ಅರಮನೆಯ ಬಂಗಾರು ಅರಸರು ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಾಜ ರಾಧಕೃಷ್ಣ ಆಳ್ವ, ಸೀತಾರಾಮ ರೈ, ಅರುಣ್ ಕುವೆಲ್ಲೊ, ದಿನೇಶ್ ಮೆದು, ನರ್ಸಪ್ಪ ಪೂಜಾರಿ, ವಿಕಾಸ್ ಪುತ್ತೂರು, ಎಸ್ ಅಭಿಷೇಕ್ ವಿಟ್ಲ, ಮಾಧವ ಮಾವೆ, ತಾರನಾಥ ವಿಟ್ಲ, ರಘುಪತಿ ಪೈ ಮತ್ತಿತರರು ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ವಿಟ್ಲ ಮೆಸ್ಕಾಂನಲ್ಲಿ ಉತ್ತಮ ಸೇವೆಗೈಯುತ್ತಿರುವ ಪವರ್ ಮ್ಯಾನ್‌ಗಳನ್ನು ಗೌರವಿಸಲಾಯಿತು. ಅರೆಹೊಳೆ ಪ್ರತಿಷ್ಠಣ,ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ರಾಮ ಪದವಿ ಕಾಲೇಜು ಕಲ್ಲಡ್ಕ ಪ್ರಸ್ತುತಪಡಿಸಿದ ವಸು ವತ್ಸಲೆ ಭಾರತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೆ. 25 ರಂದು ಮಾಜಿ ಶಾಸಕ ಸಂಜೀವ ಮಠಂದೂರು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕದ ಅಧ್ಯಕ್ಷರು ವಿಟಿವಿ ಆಡಳಿತ ನಿರ್ದೇಶಕರು ರಾಮ್‌ದಾಸ್ ಶೆಟ್ಟಿ ವಿಟ್ಲ, ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿ ಕೃಷ್ಣ ಹಸಂತಡ್ಕ, ಬಿಜೆಪಿ ಅಲ್ಪ ಸಂಖ್ಯಾತ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಕುಂಞ ನೆಲ್ಯಾಡ್ಕ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೀಡಿನಮಜಲು ಸುಧಾಕರ ಶೆಟ್ಟಿ ಬೀಡಿನಮಜಲು, ಸಾಜ ರಾಧಕೃಷ್ಣ ಆಳ್ವ, ಯತಿನ್ ಕುಮಾರ್, ರಮೇಶ್ ವರಪ್ಪಾದೆ, ರಾಮ್‌ದಾಸ್ ಶೆಣೈ, ತಾರನಾಥ ನೆಕ್ಕರೆಕಾಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಕಬಡ್ಡಿ ಕ್ರೀಡಾಪಟುಗಳಾದ ಭರತ್ ರಾಜ್ ಮತ್ತು ವಿಶ್ವರಾಜ್ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಅನನ್ಯ ಇವರನ್ನು ಸನ್ಮಾನಿಸಲಾಯಿತು. ಬಳಿಕ ಆಳ್ವಾಸ್ ಕಾಲಜು ಮೂಡಬಿದಿರೆ ಪ್ರಸ್ತುತ ಪಡಿಸಿದ ಆಳ್ವಾಸ್ ಐಸಿರಿ ಸಾಂಸ್ಕೃತಿಕ ವೈಭವ ನಡೆಯಿತು. ಸ್ವಸ್ತಿಕ್ ಫ್ರೆಂಡ್ಸ್‌ನ ಅರುಣ್ ವಿಟ್ಲ , ನಾಗೇಶ್ ವಿಟ್ಲ, ರವಿಪ್ರಕಾಶ್, ದಯಾನಂದ ಉಜಿರೆಮಾರ್ ಮತ್ತು ಸ್ವಸ್ತಿಕ್ ಫ್ರೆಂಡ್ಸ್‌ನ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.