Thursday, July 23, 2026
spot_imgspot_img
spot_imgspot_img

2026 ಹೊಸ ವರ್ಷಾಚರಣೆ: ಮಂಗಳೂರಿನಲ್ಲಿ ಕಟ್ಟುನಿಟ್ಟಿನ ಪೊಲೀಸ್ ಮಾರ್ಗಸೂಚಿ, ಅನುಮತಿ ಇಲ್ಲದೆ ಆಚರಣೆ ನಿಷೇಧ

- Advertisement -
- Advertisement -

ಮಂಗಳೂರು: 2026ರ ಹೊಸ ವರ್ಷದ ಸಂಭ್ರಮಾಚರಣೆ ಸಂಬಂಧ ಮಂಗಳೂರು ನಗರ ಪೊಲೀಸ್ ಇಲಾಖೆ ಈಗಾಗಲೇ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೊಸ ವರ್ಷಾಚರಣೆಯ ಎಲ್ಲ ಕಾರ್ಯಕ್ರಮಗಳ ಆಯೋಜಕರು ಹಾಗೂ ಸಾರ್ವಜನಿಕರು ನೀಡಲಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪೊಲೀಸ್ ಇಲಾಖೆ ಸೂಚಿಸಿದೆ.

ಪೊಲೀಸರ ಪೂರ್ವಾನುಮತಿ ಪಡೆಯದೇ ಸಾರ್ವಜನಿಕವಾಗಿ ಯಾವುದೇ ರೀತಿಯ ಆಚರಣೆಗಳಿಗೆ ಅವಕಾಶ ಇರುವುದಿಲ್ಲ. ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಅಥವಾ ಕಿರುಕುಳ ಉಂಟಾಗದಂತೆ ಜವಾಬ್ದಾರಿತಯುತವಾಗಿ ಆಚರಣೆ ನಡೆಸುವಂತೆ ಮನವಿ ಮಾಡಲಾಗಿದೆ.

ಹೊಸ ವರ್ಷಾಚರಣೆಯ ಹೆಸರಿನಲ್ಲಿ ಅತೀವೇಗದ ಚಾಲನೆ, ವೀಲಿಂಗ್, ಅಸಭ್ಯ ವರ್ತನೆ ಸೇರಿದಂತೆ ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಯಾವುದೇ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.

ನಗರದಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪಿಸಿಆರ್ ವಾಹನಗಳು, ಹೈವೇ ಪೆಟ್ರೋಲ್ ವಾಹನಗಳು, ಪಿಕೆಟ್ ಪಾಯಿಂಟ್‌ಗಳು, ಚೆಕ್ ಪೋಸ್ಟ್‌ಗಳು ಹಾಗೂ ರೌಂಡ್ಸ್ ಕರ್ತವ್ಯಕ್ಕೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳು, ಎಫ್‌ಎಎಫ್ ಹಾಗೂ ಸಿಎಆರ್ ತುಕಡಿಗಳನ್ನೂ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

ಸಾರ್ವಜನಿಕರು ಯಾವುದೇ ದೂರುಗಳು ಅಥವಾ ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು. 112 ಸಂಪರ್ಕ ಲಭ್ಯವಾಗದಿದ್ದಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 0824-2220800 ಅಥವಾ 9480802321 ಗೆ ಕರೆ ಮಾಡುವಂತೆ ಪೊಲೀಸ್ ಆಯುಕ್ತರು, ಮಂಗಳೂರು ನಗರ ತಿಳಿಸಿದ್ದಾರೆ.

- Advertisement -

Related news

error: Content is protected !!