Tuesday, July 21, 2026
spot_imgspot_img
spot_imgspot_img

ಮಹಾರಾಷ್ಟ್ರದ 16 ವಿಧಾನ ಪರಿಷತ್‌ ಸ್ಥಾನಗಳಿಗೆ ಜೂ.18ರಂದು ಮತದಾನ

- Advertisement -
- Advertisement -

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಮಹಾರಾಷ್ಟ್ರದ 16 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ್ದು, ಜೂನ್ 18ರಂದು ಮತದಾನ ಹಾಗೂ ಜೂನ್ 22ರಂದು ಮತ ಎಣಿಕೆ ನಡೆಯಲಿದೆ

ಮಹಾರಾಷ್ಟ್ರದ 16 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರ ಅಧಿಕಾರಾವಧಿ 2022 ಮತ್ತು 2025ರ ನಡುವೆ ವಿವಿಧ ಹಂತಗಳಲ್ಲಿ ಮುಕ್ತಾಯಗೊಂಡಿದೆ ಎಂದು ಆಯೋಗ ಹೇಳಿದೆ.

ಚುನಾವಣಾ ವೇಳಾಪಟ್ಟಿಯ ಪ್ರಕಾರ, ಚುನಾವಣೆಗೆ ಅಧಿಕೃತ ಅಧಿಸೂಚನೆಯನ್ನು ಮೇ 25ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಜೂ.1 ಕೊನೆಯ ದಿನಾಂಕವಾಗಿದ್ದು, ಜೂ.2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಜೂ.4ರವರೆಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು. ಜೂ.18ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಎಲ್ಲಾ 16 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಜೂ.25ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದಿದೆ.

ಚುನಾವಣಾ ವೇಳಾಪಟ್ಟಿ ಘೋಷಣೆಯ ನಂತರ ಸಂಬಂಧಿತ ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆಯಾಗಿದೆ. ಸೊಲ್ಲಾಪುರ, ಅಹಮದ್‌ನಗರ, ಥಾಣೆ, ಜಲಗಾಂವ್, ಸಾಂಗ್ಲಿ-ಕಮ್-ಸತಾರಾ, ನಾಂದೇಡ್, ಯವತ್ಮಾಲ್, ಪುಣೆ, ಭಂಡಾರ-ಕಮ್-ಗೊಂಡಿಯಾ, ರಾಯಗಡ-ಕಮ್-ರತ್ನಗಿರಿ-ಕಮ್-ಸಿಂಧುದುರ್ಗ, ನಾಸಿಕ್, ವಾರ್ಧಾ-ಕಮ್-ಚಂದ್ರಾಪುರ-ಕಮ್ ಒಸ್ಮಾನಾಬಾದ್-ಕಮ್-ಲಾತೂರ್-ಕಮ್-ಬೀಡ್, ಪರ್ಭಾನಿ-ಕಮ್-ಹಿಂಗೋಲಿ ಮತ್ತು ಔರಂಗಾಬಾದ್-ಕಮ್-ಜಲ್ನಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!