Tuesday, April 16, 2024
spot_imgspot_img
spot_imgspot_img

ಕೊರೊನಾ ಲಸಿಕೆ ನೋಂದಣಿಗೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಕೇಂದ್ರ ಸರಕಾರ ಕೊರೊನಾ ಲಸಿಕೆಯ ವಿಚಾರದಲ್ಲಿ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನ ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್​ ಅಪ್ಲಿಕೇಶನ್​ ಸೇರಿದಂತೆ ಡಿಜಿಟಲ್​ ಫ್ಲಾಟ್​ಫಾರ್ಮ್​ನ್ನು ಅಭಿವೃದ್ಧಿಪಡಿಸಿದೆ.

ಕೋವಿಡ್ ಡಿಜಿಟಲ್​ ಫ್ಲಾಟ್​ಫಾರ್ಮ್ ಲಸಿಕೆ ಡೇಟಾವನ್ನ ದಾಖಲು ಮಾಡಲು ಸಹಾಯ ಮಾಡಬಲ್ಲ ಮೊಬೈಲ್​ ಅಪ್ಲಿಕೇಶನ್​ನ್ನು ಹೊಂದಿದೆ. ಯಾರು ಲಸಿಕೆಯನ್ನು ಪಡೆಯಲು ಬಯಸುತ್ತಾರೋ ಅವರು ಈ ಅಪ್ಲಿಕೇಷನ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.

ಕೋವಿಡ್ ಅಪ್ಲಿಕೇಶನ್​ನಲ್ಲಿ ನಿರ್ವಾಹಕ ಮಾಡ್ಯೂಲ್​, ನೋಂದಣಿ ಮಾಡ್ಯೂಲ್​, ವ್ಯಾಕ್ಸಿನೇಷನ್​ ಮಾಡ್ಯೂಲ್​, ಫಲಾನುಭವಿ ಸ್ವೀಕೃತಿ ಮಾಡ್ಯೂಲ್​ ಹಾಗೂ ವರದಿ ಮಾಡ್ಯೂಲ್​ ಎಂಬ ಐದು ವಿಭಾಗವಿದೆ . ಅಪ್ಲಿಕೇಷನ್ ಮೂಲಕ ಲಸಿಕೆಯನ್ನು ನೋಂದಾಯಿಸಿ ಕೊಳ್ಳಬಹು ದಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್ ತಿಳಿಸಿದ್ದಾರೆ.

- Advertisement -

Related news

error: Content is protected !!