Tuesday, May 7, 2024
spot_imgspot_img
spot_imgspot_img

ಟಾಪ್ 10 ಹೆದ್ದಾರಿಗಳ ಪಟ್ಟಿ ಬಿಡುಗಡೆ- ‘ಕುಂದಾಪುರ-ಗೋವಾ’ ರಾಷ್ಟೀಯ ಹೆದ್ದಾರಿಗೆ 2 ನೇ ಸ್ಥಾನ

- Advertisement -G L Acharya panikkar
- Advertisement -

ನವದೆಹಲಿ: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿಗಳ ಸರ್ವೆ ನಡೆಸಿ ಅತ್ಯುತ್ತಮ 10 ರಸ್ತೆಗಳನ್ನ ಪಟ್ಟಿ ಮಾಡಿದೆ.

ಈ ಪೈಕಿ ಕುಂದಾಪುರ-ಗೋವಾ ರಾಷ್ಟ್ರೀಯ ಹೆದ್ದಾರಿ ಎರಡನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು-ನೆಲಮಂಗಲ ಹೆದ್ದಾರಿ 8ನೇ ಸ್ಥಾನ ಪಡೆದುಕೊಂಡಿದೆ.

ರಸ್ತೆಗಳ ಗುಣಮಟ್ಟ, ಸುರಕ್ಷತೆ ಮತ್ತು ಸೇವೆಗಳ ಅನುಗುಣವಾಗಿ ಈ ಸರ್ವೆ ನಡೆಸಲಾಗಿದೆ. ದೇಶದಾದ್ಯಂತ ಒಟ್ಟು 18,668 ಕಿ.ಮೀ ಅಂತರವನ್ನ ಸಂಪರ್ಕಿಸುವ 219 ರಾಷ್ಟ್ರೀಯ ಹೆದ್ದಾರಿಗಳನ್ನ ಸರ್ವೆ ಮಾಡಲಾಗಿದೆ.

ಈ ಹಿಂದೆ ಜಗತ್ತಿನಾದ್ಯಂತ ಇಂತಹ ಸರ್ವೆಗಳನ್ನ ನಡೆಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ದೇಶದಲ್ಲೂ ಇಂತಹ ಸರ್ವೆ ನಡೆಸಲಾಗಿದೆ. ಸರ್ಕಾರದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇನ್ನು ಮುಂದೆ 6 ತಿಂಗಳಿಗೊಮ್ಮೆ ಇಂತಹ ಸರ್ವೆಗಳನ್ನ ನಡೆಸಲಿದೆ ಎಂದು ಹೇಳಿದೆ.

ಸರ್ವೇ ಪ್ರಕಾರ ಟಾಪ್ 10 ಹೆದ್ದಾರಿಗಳ ಪಟ್ಟಿ ಹೀಗಿದೆ:

1. ಅಹಮದಾಬಾದ್-ವಡೋದರಾ-NH48- 102 ಕಿ.ಮೀ

2. ಗೋವಾ, ಕರ್ನಾಟಕ-ಕುಂದಾಪುರ-NH-66-141ಕಿ.ಮೀ

3. ಅಹಮದಾಬಾದ್- ವಡೋದರಾ-NE-1-93ಕಿ.ಮೀ

4. ಸಿಮ್ಗಾ-ಸರ್ಗಾವ್-NH-130-42 ಕಿ.ಮೀ

5. ಸೋಲಾಪುರ್- ಯೆದೆಸಿ-NH-211-42 ಕಿ.ಮೀ

6. ಕೃಷ್ಣಗಿರಿ-ವಲಜಾಹ್​ಪೇಟ್-NH-48- 148 ಕಿ.ಮೀ

7. ಗೋಧ್ರಾ-ಗುಜರಾತ್/ಮಧ್ಯಪ್ರದೇಶ್-NH47-87.1 ಕಿ.ಮೀ

8. ಬೆಂಗಳೂರು-ನೆಲಮಂಗಲ- NH4

9. ಇಸ್ಲಾಂನಗರ್-ಕಡ್ತಲ್-NH44

10.ಮಹುಲಿಯಾ-ಬಹರಾಗೊರ&ಬಹರಾಗೊರ-ಚಿಚಿರಾ-NH-33

- Advertisement -

Related news

error: Content is protected !!