Friday, July 24, 2026
spot_imgspot_img
spot_imgspot_img

ಡೆಂಗ್ಯೂ ಜ್ವರಕ್ಕೆ ನವ ವಿವಾಹಿತೆ ಬಲಿ..!!

- Advertisement -
- Advertisement -

ಡೆಂಗ್ಯೂ ಜ್ವರದಿಂದ ನವ ವಿವಾಹಿತೆಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.

ರಿಪ್ಪನ್‌ಪೇಟೆಯ ಶಬರೀಶನಗರದ ನಿವಾಸಿ ಮಧುರ (31) ಮೃತಪಟ್ಟ ಮಹಿಳೆ.

ಕಳೆದ ಆರು ತಿಂಗಳ ಹಿಂದೆ ಶಬರೀಶನಗರದ ಮಂಜುನಾಥ್‌ ಎಂಬುವವರೊಂದಿಗೆ ವಿವಾಹವಾಗಿತ್ತು. ಕಳೆದೊಂದು ವಾರದಿಂದ ಡೆಂಗ್ಯೂ ಜ್ವರದ ಹಿನ್ನಲೆಯಲ್ಲಿ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಿಗ್ಗೆ ಡಿಸ್ಟಾರ್ಜ್ ಆಗಿ ತಾಯಿ ಮನೆಯಾದ ತಾಳಗುಪ್ಪಕ್ಕೆ ತೆರಳಿದ್ದಾರೆ ರಾತ್ರಿ ಸಮಯದಲ್ಲಿ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಾಗರ ಆಸ್ಪತ್ರೆಗೆ ಕರೆತರಲಾಗಿತ್ತು.

ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇಂದು ರಿಪ್ಪನ್‌ಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!