Sunday, June 14, 2026
spot_imgspot_img
spot_imgspot_img

ಕೇರಳದ ಕಾಸರಗೋಡು ಮತ್ತು ಮುಳ್ಳೇರಿಯದಲ್ಲಿ ಧರ್ಮ ಚಾವಡಿ ತುಳು ಚಿತ್ರದ್ದೆ ಸುದ್ದಿ

- Advertisement -
- Advertisement -

ತುಳುನಾಡಿನಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದ ತುಳು ಚಿತ್ರ ಧರ್ಮ ಚಾವಡಿ ಕೇರಳದಲ್ಲೂ ತನ್ನ ಗೆಲುವಿನ ನಾಗಲೋಕವನ್ನು ಮುಂದುವರೆಸಿದೆ. ಬಹಳ ಸಮಯದ ನಂತರ ತುಳು ಚಿತ್ರ ಕೇರಳದಲ್ಲಿ ಈ ರೀತಿಯ ಆರಂಭವನ್ನು ಪಡೆದುಕೊಂಡಿದೆ.

ಮುಳ್ಳೇರಿಯದಲ್ಲಿ ಎರಡು ವಾರ ಪೂರೈಸಿದ್ದು ಅನೇಕ ಹೌಸಫುಲ್ಲ್ ಶೋ ಗಳನ್ನು ಧರ್ಮ ಚಾವಡಿ ಪಡೆದುಕೊಂಡರೆ ಕಾಸರಗೋಡಿನಲ್ಲಿ ಈ ವಾರ ಬಿಡುಗಡೆಯಾಗಿ ಶುಕ್ರವಾರ ಶನಿವಾರ ಹಾಗೂ ಆದಿತ್ಯವಾರದ ಒಟ್ಟು 6ಶೋ ಗಳು ಹೌಸಫುಲ್ಲ್ ಪ್ರದರ್ಶನ ಪಡೆದುಕೊಂಡಿದೆ. ಇದರ ಜೊತೆಗೆ ಆದಿತ್ಯವಾರ ಪ್ರೇಕ್ಷಕ ಒತ್ತಾಯದ ಮೇರೆಗೆ ರಾತ್ರಿಯ 10.30 ರ ಪ್ರದರ್ಶನವನ್ನು ತೆರೆದು ಅದು ಕೂಡ ಹೌಸಫುಲ್ಲ್ ಪ್ರದರ್ಶನ ಕಂಡಿದ್ದು ವಿಶೇಷ. ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ಈ ಚಿತ್ರ ಕೇರಳದಲ್ಲೂ ತನ್ನ ಗೆಲುವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡದ ಪುತ್ತೂರಿನ ಒಂದೇ ಚಿತ್ರಮಂದಿರದಲ್ಲಿ ಈಗಾಗಲೇ ಸುಮಾರು 11,000 ಜನ ವೀಕ್ಷಣೆ ಮಾಡಿದ್ದು ಉಳಿದ ಚಿತ್ರಮಂದಿರದಲ್ಲೂ ಉತ್ತಮ ಪ್ರದರ್ಶನ ಕಂಡಿದೆ.

- Advertisement -

Related news

error: Content is protected !!