Saturday, June 20, 2026
spot_imgspot_img
spot_imgspot_img

ನೈಜೀರಿಯಾದಲ್ಲಿ ಹರಿಯಿತು ರಕ್ತದ ಕೋಡಿ; ನಡೆದದ್ದು ಏನು?

- Advertisement -
- Advertisement -

ನೈಜೀರಿಯಾದ ವಾಯುವ್ಯ ರಾಜ್ಯವಾದ ಕೆಬ್ಬಿಯಲ್ಲಿ ಡಕಾಯಿತರು ನಡೆಸಿದ ದಾಳಿಯ ನಂತರ ಕನಿಷ್ಠ 88 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ.

ರಾಜ್ಯದ ಡಾಂಕೊ-ವಾಸಾಗು ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿ ಗುರುವಾರ ಎಂಟು ವಿವಿಧ ಸಮುದಾಯಗಳ ಮೇಲೆ ಡಕಾಯಿತರು ಭಯೋತ್ಪಾದನೆ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಬ್ಬಿ ರಾಜ್ಯ ಪೊಲೀಸ್ ವಕ್ತಾರ ನಫಿಯು ಅಬೂಬಕರ್ ಇದು ನಿಜಕ್ಕೂ ಭೀಕರ ಕೃತ್ಯ ಡಕಾಯಿತರ ಬಂಧನಕ್ಕೆ, ದಾಳಿಯನ್ನು ತಡೆಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ರಾಜ್ಯ ರಾಜಧಾನಿ ಬಿರ್ನಿನ್ ಕೆಬ್ಬಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಹೆಚ್ಚಿನ ದಾಳಿಗಳನ್ನು ತಡೆಯಲು ಸಮುದಾಯಗಳಿಗೆ ಭದ್ರತಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಅಬೂಬಕರ್ ಹೇಳಿದ್ದು, ದಾಳಿಯಲ್ಲಿ ಮೃತಪಟ್ಟಿರುವವರ ಪೈಕಿ 66 ಶವಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಅಂತ ಹೇಳಿದ್ದಾರೆ.

- Advertisement -

Related news

error: Content is protected !!