Friday, March 29, 2024
spot_imgspot_img
spot_imgspot_img

ನಿತೀಶ್ ಗೆ ಮತ್ತೆ ಒಲಿದ ಸಿ.ಎಂ ಗಾದಿ

- Advertisement -G L Acharya panikkar
- Advertisement -

ಪಾಟ್ನಾ : ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಎನ್​ಡಿಎ ಸರ್ಕಾರಕ್ಕೆ ಅಧಿಕಾರ ಸಿಕ್ಕಿದ್ದು, ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್​ಕುಮಾರ್ ಅವರನ್ನು ಆಯ್ಕೆ ಮಾಡಿ ಎನ್​ಡಿಎ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ನಡೆದ ಎನ್​ಡಿಎ ಸಭೆಯಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ. ಜೆಡಿಯು ಕಡಿಮೆ ಸ್ಥಾನ ಗೆದ್ದರೂ ನಿತೀಶ್​ಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಒಲಿದಿದೆ.

ಶುಕ್ರವಾರವಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​, ಹೊಸ ಎನ್​ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.

ಇದೀಗ ಎನ್​ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಯಾರೆಂಬ ನಿರ್ಣಯ ಹೊರಬಿದ್ದಿದ್ದು, ನಿತೀಶ್​ ಅವರಿಗೆ ಸಿಎಂ ಗಾದಿ ಮತ್ತೆ ಒಲಿದಿದೆ.ಸೋಮವಾರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

- Advertisement -

Related news

error: Content is protected !!