Tuesday, September 15, 2026
spot_imgspot_img
spot_imgspot_img

2,000 ರೂ. ವರೆಗಿನ ಯುಪಿಐ ಪಾವತಿಗಳಿಗೆ ಶುಲ್ಕವಿಲ್ಲ – ಕೇಂದ್ರ ಸರ್ಕಾರ ಮಹತ್ವದ ಆದೇಶ

- Advertisement -
- Advertisement -

ನವದೆಹಲಿ: 2,000 ರೂ. ವರೆಗೆ ನಡೆಯುವ ಎಲ್ಲಾ ಯುಪಿಐ ವಹಿವಾಟುಗಳು ಹಾಗೂ RuPay ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೆ ಬ್ಯಾಂಕ್‌ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ(ಸೆ.14) ಅಧಿಸೂಚನೆ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ, ನಿಗದಿಪಡಿಸಿರುವ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನ ಬಳಸಿಕೊಂಡು ಪಾವತಿ ಮಾಡುವ ಅಥವಾ ಸ್ವೀಕರಿಸುವ ಯಾವುದೇ ವ್ಯಕ್ತಿಯಿಂದ ಬ್ಯಾಂಕ್ ಅಥವಾ ಸಿಸ್ಟಂ ಪ್ರೊವೈಡರ್ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

2025-26ನೇ ಹಣಕಾಸು ವರ್ಷದಲ್ಲಿ ನಡೆದ ವ್ಯಕ್ತಿಯಿಂದ ವ್ಯಾಪಾರಿಗೆ(P2M) ಯುಪಿಐ ಪಾವತಿಗಳ ಪೈಕಿ ಕೇವಲ 4 ಪ್ರತಿಶತ ವಹಿವಾಟುಗಳು ಮಾತ್ರ 2 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ್ದಾಗಿದ್ದವು. ಆದ್ರೆ, ಶೇ.4ರಷ್ಟು ವಹಿವಾಟುಗಳು ಒಟ್ಟು ಯುಪಿಐ ಪಾವತಿ ಮೌಲ್ಯದ ಸುಮಾರು ಮೂರನೇ ಎರಡರಷ್ಟು ಪಾಲನ್ನು ಹೊಂದಿದ್ದವು.

2025-26ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿ 24,000 ಕೋಟಿಗೂ ಅಧಿಕ ಯುಪಿಐ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 314 ಲಕ್ಷ ಕೋಟಿ ಆಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!