Tuesday, June 23, 2026
spot_imgspot_img
spot_imgspot_img

NO LOCKDOWN: ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್ !

- Advertisement -
- Advertisement -
vtv vitla
vtv vitla
vtv vitla
vtv vitla

ಬೆಂಗಳೂರು: ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ, ಈ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

vtv vitla

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕೋವಿಡ್ ರೂಪಾಂತರಿತ ಹೊಸ ತಳಿ ಒಮಿಕ್ರಾನ್ ವಿಚಾರವನ್ನು ಮುಂದಿಟ್ಟು ಲಾಕ್ ಡೌನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲಮಯ, ತಪ್ಪು ಸುದ್ದಿ ಹರಡುತ್ತಿರುವುದು ಕಂಡುಬರುತ್ತಿದೆ. ಈ ರೀತಿ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಬೇಡಿ ಎಂದವರು ಹೇಳಿದ್ದಾರೆ.


ಕೋವಿಡ್ 1 ಮತ್ತು 2 ಅಲೆಯಿಂದ ಈಗಾಗಲೇ ಜನಸಾಮಾನ್ಯರು ಬಹಳ ಕಷ್ಟ-ನಷ್ಟ ಅನುಭವಿಸಿದ್ದಾರೆ. ಹಲವು ಜೀವಹಾನಿ ಉಂಟಾಗಿದೆ. ಆದ್ದರಿಂದ ಜನರಲ್ಲಿ ಮತ್ತೆ ಗೊಂದಲ ಮೂಡಿಸಬೇಡಿ ಎಂದು ಸಚಿವರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!