Saturday, May 4, 2024
spot_imgspot_img
spot_imgspot_img

ನಾರ್ತ್‌ ಈಸ್ಟ್ ಸೂಪರ್‌ಫಾಸ್ಟ್ ರೈಲು ದುರಂತ; ನಾಲ್ವರು ದುರ್ಮರಣ, ಹಲವರಿಗೆ ಗಾಯ

- Advertisement -G L Acharya panikkar
- Advertisement -

ದೆಹಲಿ- ಕಾಮಾಕ್ಯ ನಾರ್ತ್‌ ಈಸ್ಟ್ ಸೂಪರ್‌ಫಾಸ್ಟ್ ರೈಲಿನ ಆರು ಬೋಗಿಗಳು ಬುಧವಾರ ಬಿಹಾರದ ಬಕ್ಸರ್ ಸಮೀಪ ಹಳಿ ತಪ್ಪಿ ಉಂಟಾದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಸೂಪರ್‌ಫಾಸ್ಟ್ ರೈಲು ರಾತ್ರಿ 9.35ರ ಸುಮಾರಿಗೆ ರಘುನಾಥಪುರ ನಿಲ್ದಾಣದ ಬಳಿ ಹಳಿ ತಪ್ಪಿದೆ. ಎರಡು ಎಸಿ 3 ಟೈರ್ ಬೋಗಿಗಳು ಬುಡಮೇಲಾಗಿದ್ದು, ಇತರ ನಾಲ್ಕು ಬೋಗಿಗಳು ಹಳಿಯಿಂದ ಆಚೆಗೆ ಎಸೆಯಲ್ಪಟ್ಟಿವೆ.

“ಆನಂದ್ ವಿಹಾರ್ ಟರ್ಮಿನಲ್ ನಿಂದ ಕಾಮಾಕ್ಯಗೆ ತೆರಳುತ್ತಿದ್ದ ರೈಲುಗಾಡಿ ಸಂಖ್ಯೆ 12506 ನಾರ್ತ್ಈಸ್ಟ್ ಎಕ್ಸ್ಪ್ರೆಸ್ ರೈಲಿನ ಕೆಲ ಬೋಗಿಗಳು ರಾತ್ರಿ 9.35ರ ವೇಳೆಗೆ ದಾನಾಪುರ ವಿಭಾಗದ ರಘುನಾಥಪುರ ನಿಲ್ದಾಣ ಬಳಿ ಹಳಿತಪ್ಪಿವೆ. ಸಹಾಯವಾಣಿ ಸಂಖ್ಯೆ ಪಿಎನ್ ಬಿಇ-9771449971, ಡಿಎನ್ಆರ್- 8905697493, ಎಆರ್ಎ- 8306182542, ಸಿಓಎಂಎಲ್ ಸಿಎಲ್ಎಲ್- 7759070004” ಎಂದು ಉತ್ತರ ರೈಲ್ವೆ ಹೇಳಿಕೆ ನೀಡಿದೆ.

- Advertisement -

Related news

error: Content is protected !!