Friday, April 26, 2024
spot_imgspot_img
spot_imgspot_img

ಒಬ್ಬ ಮಗನ ಅಂತ್ಯಕ್ರಿಯೆ ನಡೆಸಿ ಮನೆಗೆ ಬಂದಾಗ ಇನ್ನೊಬ್ಬ ಮಗನ ಮೃತ್ಯು!

- Advertisement -G L Acharya panikkar
- Advertisement -

ನೋಯ್ಡಾ: ಪಶ್ಚಿಮದ ಜಲಾಲ್‌ಪುರ ಗ್ರಾಮದಲ್ಲಿ ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳು ಕೊರೋನಾ ಸೋಂಕಿಗೆ ಬಲಿಯಾದ ಆಘಾತಕಾರಿ ಘಟನೆ ನಡೆದಿದೆ. ಕೊರೊನಾದಿಂದ ಇಬ್ಬರು ಮಕ್ಕಳನ್ನು ಕಳೆದುಕೊಂಡು ತಂದೆ-ತಾಯಿ ರೋಧನ ಮುಗಿಲು ಮುಟ್ಟಿದೆ.

ಜಲಾಲ್‌ಪುರ ಗ್ರಾಮದ ಉತರ ಸಿಂಗ್​ ಅವರ ಓರ್ವ ಮಗನ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಮನೆಗೆ ಬರುವಷ್ಟರಲ್ಲಿ ಇನ್ನೋರ್ವ ಪುತ್ರ ಕೋವಿಡ್​ ಸೋಂಕಿಗೆ ಬಲಿಯಾಗಿದ್ದಾರೆ. ಉತರ ಸಿಂಗ್ ಅವರ ಪುತ್ರ ಪಂಕಜ್ ಸಾವನ್ನಪ್ಪಿದ, ಪಂಕಜ್​ನ ಚಿತೆಗೆ ಅಗ್ನಿ ಸ್ಪರ್ಶಿಸಿ ಮನೆಗೆ ಮರಳುತ್ತಿದ್ದಂತೆ, ಕೊರೊನಾದಿಂದ ಬಳಲುತ್ತಿದ್ದ ಮತ್ತೋರ್ವ ಮಗ ದೀಪಕ್​ ಸಾವನ್ನಪ್ಪಿದ್ದಾನೆ. ಈ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 18 ಜನರು ಸಾವನ್ನಪ್ಪಿದ್ದು, ಮರಣ ಮೃದಂಗ ಮುಂದುವರೆದಿದೆ.

- Advertisement -

Related news

error: Content is protected !!