Thursday, July 3, 2025
spot_imgspot_img
spot_imgspot_img

ಶೇ.70ರಷ್ಟಿರುವ ಒಬಿಸಿ ಮೀಸಲು ಶೇ.51ಕ್ಕೆ ಹೆಚ್ಚಿಸಲು ಶಿಫಾರಸು

- Advertisement -
- Advertisement -

ಬೆಂಗಳೂರು: ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ.70ರಷ್ಟಿದ್ದು ಮೀಸಲಾತಿ ಅರ್ಧದಷ್ಟೂ (ಶೇ.32) ಇಲ್ಲ. ಹೀಗಾಗಿ ಓಬಿಸಿ ಮೀಸಲಾತಿ ಪ್ರಮಾಣವನ್ನು ಶೇ.51ಕ್ಕೆ ಹೆಚಿಸಬೇಕು ಎಂದು ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಶಿಫಾರಸು ಮಾಡಿದೆ. ಹಿಂದುಳಿದ ವರ್ಗಗಳ ಪ್ರವರ್ಗವಾರು ವರ್ಗೀಕರಣವನ್ನು 5 ರಿಂದ 6ಕ್ಕೆ ಹೆಚ್ಚಿಸಿರುವ ಆಯೋಗವು 2-ಎ ಅಡಿಯಲ್ಲಿರುವ ಕೆಲ ಜಾತಿಗಳನ್ನು ಪ್ರವರ್ಗ-1ಕ್ಕೆ ವರ್ಗಾವಣೆ ಮಾಡಿದ್ದು, ಪ್ರವರ್ಗ -1 ನ್ನು ಪ್ರವರ್ಗ 1-ಎ ಹಾಗೂ ಪ್ರವರ್ಗ 1-ಬಿ ಎಂದು ಎರಡು ಪ್ರವರ್ಗಗಳಾಗಿ ವರ್ಗೀಕರಣ ಮಾಡಿದೆ. ಇದರಿಂದ ಹಿಂದುಳಿದ ವರ್ಗದ 2-ಎ ಅಡಿ ಹಾಲಿ ಇದ್ದ ಜಾತಿಗಳು ಪಡೆಯುತ್ತಿದ್ದ ಮೀಸಲಾತಿ ಶೇ.15 ರಿಂದ ಶೇ.22ಕ್ಕೆ ಹೆಚ್ಚಳ ಆಗಲಿದೆ. ವರದಿ ಪ್ರಕಾರ ಮುಸ್ಲಿಮರು 75.27ಲಕ್ಷದಷ್ಟಿದ್ದು, ಈ ಸಮುದಾಯದ (2-ಬಿ) ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ ಶೇ.8ಕ್ಕೆ ಏರಿಸುವಂತೆ ಜಯಪ್ರಕಾಶ ಹೆಗ್ಡೆ ಆಯೋಗ ಶಿಫಾರಸು ಮಾಡಿದೆ. 3-ಬಿ ಪಟ್ಟಿಯಲ್ಲಿರುವ ಲಿಂಗಾಯತ ಹಾಗೂ ಅದರ ಉಪಜಾತಿಗಳ ಒಟ್ಟು ಜನಸಂಖ್ಯೆ 81 ಲಕ್ಷದಷ್ಟಿದ್ದು ಅದರಲ್ಲಿ ಲಿಂಗಾಯತರ ಸಂಖ್ಯೆ 66 ಲಕ್ಷದಷ್ಟಿದೆ. ಮೀಸಲಾತಿ ಪ್ರಮಾಣ ಶೇ.5 ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ ಅದನ್ನು ಶೇ.8ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ.

3-ಎ ಪಟ್ಟಿಯಲ್ಲಿರುವ ಒಕ್ಕಲಿಗ ಮತ್ತು ಅದರ ಉಪ ಜಾತಿಗಳ ಜನಸಂಖ್ಯೆ 72 ಲಕ್ಷದಷ್ಟಿದೆ. ಇದರಲ್ಲಿ ಒಕ್ಕಲಿಗರು 61.50 ಲಕ್ಷದಷ್ಟಿದ್ದಾರೆ. ಒಟ್ಟು ಮೀಸಲಾತಿ ಶೇ.4 ರಷ್ಟಿದೆ. ಅದನ್ನು ಶೇ.7ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಕುರುಬರು ಮತ್ತಿತರ ಸಮುದಾಯಗಳ 2-ಎ ಅಡಿ 77.78 ಲಕ್ಷ ಜನಸಂಖ್ಯೆ ಇದ್ದು, ಇವರಿಗೆ ಶೇ.10 ಮೀಸಲಾತಿ, ಅತಿ ಹಿಂದುಳಿದ ಜಾತಿಗಳನ್ನು ಹೊಂದಿರುವ ಪ್ರವರ್ಗ 1-ಎ ಗೆ (34.96 ಲಕ್ಷ) ಶೇ.6 ಹಾಗೂ ಪ್ರವರ್ಗ 1-ಬಿಗೆ (73.92 ಲಕ್ಷ ಜನಸಂಖ್ಯೆಗೆ) ಶೇ.12 ಮೀಸಲಾತಿ ನೀಡಲು ಶಿಫಾರಸು ಮಾಡಲಾಗಿದೆ.

- Advertisement -

Related news

error: Content is protected !!