Saturday, April 27, 2024
spot_imgspot_img
spot_imgspot_img

ಪೈಗಂಬರ್ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟರೆ ಹಿಂಸಾಚಾರಕ್ಕೆ ತಿರುಗುತ್ತೀರಿ..!? ದೈವ ದೇವರುಗಳನ್ನು ನಿಂದಿಸುವುದು, ಚಿತ್ರ ವಿಚಿತ್ರವಾಗಿ ಎಡಿಟ್ ಮಾಡಿ ಪೋಸ್ಟ್‌ ಮಾಡುವುದು ಎಷ್ಟು ಸರಿ? ಪ್ರತಿಭಟನೆ ಮಾಡಿ ತಾಕತ್ತು ತೋರಿಸಲು ಮುಂದಾದವರು ಕುವೈತ್‌ನಿಂದ ಗೇಟ್‌ ಪಾಸ್‌

- Advertisement -G L Acharya panikkar
- Advertisement -

ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಪೈಗಂಬರ್‌ ವಿರುದ್ದ ನೀಡಿದ್ದ ಹೇಳಿಕೆ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಸಾಕಷ್ಟೂ ಸುದ್ದಿಯಾಗುತ್ತಿದೆ. ಹಿಂದೂ ಮುಸ್ಲಿಂಮರ ನಡುವೆ ಈ ರೀತಿಯ ಕಿತ್ತಾಟ ಇಂದು ಮೊನ್ನೆಯದಲ್ಲ. ಆದರೆ ವಿವಿಧತೆಯಲ್ಲಿ ಏಕತೆ ಎಂದು ಸಾರುವ ದೇಶದಲ್ಲಿ ಈಗ ಗಲಭೆಗಳೇ ಜಾಸ್ತಿಯಾಗುತ್ತಿದೆ. ಈ ಮೊದಲು ಅನ್ಯಧರ್ಮೀಯರು ಹಿಂದೂ ದೇವಾನು ದೇವತೆಗಳ ಬಗ್ಗೆ ಅವಹೇಳನ ಮಾಡಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‍ ಶರ್ಮ ಪೈಗಂಬರ್‍ ಬಗ್ಗೆ ಹೇಳಿಕೆ ಕೊಟ್ಟಿದ್ದರು.

ಕಲ್ಲು ತೂರಿ ಹುಚ್ಚಾಟ; ಮನೆಯ ಮುಂದೆ ಗಲಭೆ ಮಾಡಿದ್ರು.!
ನೂಪುರ್ ಶರ್ಮ ಹೇಳಿಕೆಯನ್ನು ಖಂಡಿಸಿ ಹಾಗೂ ಈಕೆಯ ಪರ ಧ್ವನಿ ಎತ್ತಿದವರ ವಿರುದ್ಧ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿದೆ. ಆದರೆ ಈ ಬಗ್ಗೆ ಯಾವುದೇ ದಿಟ್ಟ ಕ್ರಮಕ್ಕೆ ಸರ್ಕಾರವಾಗಲೀ ಸಂಬಂಧಪಟ್ಟ ಇಲಾಖೆಯಾಗಲೀ ಮುಂದಾಗಲಿಲ್ಲ.

ನೂಪುರ್‌ ಶರ್ಮಾ ಅವರನ್ನು ‘ಧೈರ್ಯಶಾಲಿ ಮಹಿಳೆ’ ಎಂದು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ 19 ವರ್ಷದ ಮುಸ್ಲಿಂ ಯುವಕನನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಉದ್ರಿಕ್ತ ಗುಂಪು ಯುವಕನ ಮನೆಗೆ ತೆರಳಿ, ಆತನ ಮೇಲೆ ಹಲ್ಲೆ ನಡೆಸಿ ಪ್ರಶ್ನಿಸುತ್ತಿರುವ ವಿಡಿಯೊ ಕೂಡ ವೈರಲ್‌ ಆಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದ ಯುವಕನ ಮನೆಯ ಮುಂದೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರು ಟ್ರೈನ್ ಮೇಲೆ ಕಲ್ಲು ತೂರಿ ಹುಚ್ಚಾಟ
ಪ್ರವಾದಿ ಮೊಹಮ್ಮದ್ ವಿರುದ್ಧದ ಆ ಒಂದು ಹೇಳಿಕೆಯಿಂದ ಭಾರತದಲ್ಲಿ ಕಿಡಿ ಹೊತ್ತಿಕೊಂಡಿದೆ. ಮೊನ್ನೆಯಷ್ಟೇ ಈ ಕಿಡಿ ಕಾಶ್ಮೀರದಿಂದ ಕನ್ಯಾಕುಮಾರಿವಗೂ ಧಗಧಗಿಸಿತ್ತು. ಕಲ್ಲು ತೂರಾಟ, ಗಲಭೆ, ಹಿಂಸಾಚಾರಕ್ಕೂ ಕೊರಣವಾಗಿತ್ತು. ಹೀಗೆ ಇಡೀ ದೇಶಾದ್ಯಂತ ಹೊತ್ತಿಕೊಂಡಿದ್ದ ಕಿಚ್ಚು ಸದ್ಯ ತಣ್ಣಗಾಗ್ತಿದೆ, ಪೊಲೀಸರು ದುರುಳರ ಭೇಟೆಯಾಡ್ತಿದ್ದಾರೆ. ಹೀಗಿದ್ರೂ ಪಶ್ಚಿಮ ಬಂಗಾಳದಲ್ಲಿ ಮಾತ್ರ ಪ್ರತಿಭಟನಾಕಾರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯ ಕಿಚ್ಚು ಮತ್ತಷ್ಟು ಧಗಧಗಿಸ್ತಿದೆ. ಪ್ರತಿಭಟನಾಕಾರರು ಕಲ್ಲು ತೂರಿ ಮತ್ತೆ ಹುಚ್ಚಾಟ ಮೆರೆದಿದ್ದಾರೆ. ಇದೂ ಸಾಲದೆಂಬಂತೆ ಪಶ್ಚಿಮ ಬಂಗಾಳ ಬೆತುಗಾದಹರಿ ರೈಲ್ವೇ ಸ್ಟೇಷನ್‌ಗೆ ನುಗ್ಗಿ ಟ್ರೈನ್‌ವೊಂದನ್ನ ಧ್ವಂಸಗೊಳಿಸಿದ್ದಾರೆ.

ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ನಿನ್ನೆ ಪಶ್ಚಿಮ ಬಂಗಾಳದ ನಾಯ್ಡಾ ಜಿಲ್ಲೆಯಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಕೆಲ ಪ್ರತಿಭಟನಾಕಾರರು ಹತ್ತಿರದ ರೈಲ್ವೇ ಸ್ಟೇಷನ್‌ಗೆ ನುಗ್ಗಿ ಟ್ರೈನ್ ಮೇಲೆ ಕಲ್ಲು ತೂರಿ, ಕಿಟಕಿ ಗಾಜುಗಳನ್ನ ಹೊಡೆದಾಕಿ ಹುಚ್ಚಾಟ ಮೆರೆದಿದ್ದಾರೆ. ಈ ವೇಳೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಉದ್ರಿಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಕೂಡಲೇ ರೇಲ್ವೇ ಸ್ಟೇಷನ್‌ನಿಂದ ಕಾಲ್ಕಿತ್ತ ಪ್ರತಿಭಟನಾಕಾರರು, ಹೊರ ಹೋಗಿ ಅಂಗಡಿ, ಆಸ್ಪತ್ರೆಗಳ ಮೇಲೂ ಕಲ್ಲು ತೂರಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ ಗಲಭೆ ಹತ್ತಿಕ್ಕುವಲ್ಲಿ ಇಲಾಖೆ ವಿಫಲವಾಗಿದೆ.

ದಿಟ್ಟ ಕ್ರಮಕ್ಕೆ ಹಿಂದು ಮುಂದು ಯೋಚಿಸುವ ಭಾರತ..! ವಿರೋಧದ ಪ್ರತಿಭಟನೆ ಮಾಡಿದ್ದಕ್ಕೆ ಕುವೈಟ್‌ನಿಂದ ಗಡಿಪಾರು…!
ನೂಪುರ್ ಶರ್ಮ ಹೇಳಿಕೆ ಖಂಡಿಸಿ ಕುವೈಟ್ ನಲ್ಲಿ ವಿದೇಶಿಗರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದೀಗ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನಿವಾಸಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಕುವೈಟ್ ಸರಕಾರ ಆದೇಶಿಸಿದೆ. ಶುಕ್ರವಾರ ಫಹಾಹೀಲ್ ಎಂಬಲ್ಲಿ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ಭಾರತೀಯರು ಸೇರಿದಂತೆ ಕುವೈಟ್ ನಲ್ಲಿ ಕೆಲಸಕ್ಕೆ ಆಗಮಿಸಿದ ಹಲವು ಮಂದಿ ಪ್ರತಿಭಟನೆ ನಡೆಸಿದ್ದರು.

ಆದರೆ ಕುವೈತ್‌ನಲ್ಲಿ ವಲಸಿಗರಿಂದ ಧರಣಿ ಅಥವಾ ಪ್ರತಿಭಟನೆಗಳನ್ನು ಆಯೋಜಿಸಬಾರದು ಕಾನೂನು ಮತ್ತು ನಿಬಂಧನೆಗಳು ಇದೆ. ಹೀಗಾಗಿ ಕಾನೂನಿ ಉಲ್ಲಂಘಿಸಿದ ಕಾರಣ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಪ್ರತಿಭಟನೆಯ ಭಾಗವಾಗಿರುವ ಅನಿವಾಸಿಗಳು ಮುಂದೆ ದೇಶಕ್ಕೆ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ವರದಿಯಾಗಿದೆ. ಕುವೈತ್‌ನಲ್ಲಿರುವ ಎಲ್ಲಾ ವಲಸಿಗರು ಕುವೈತ್ ಕಾನೂನುಗಳನ್ನು ಗೌರವಿಸಬೇಕು ಮತ್ತು ಯಾವುದೇ ರೀತಿಯ ಪ್ರದರ್ಶನಗಳಲ್ಲಿ ಭಾಗವಹಿಸಬಾರದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂ ದೇವರನ್ನು, ಭಾರತದ ಬಗ್ಗೆ ಏನೂ ಬೇಕಾದ್ರೂ ಹೇಳಬಹುದು..?!
ಇನ್ನೂ ನೂಪುರ್‍ ಶರ್ಮಾ ಹೇಳಿಕೆಯ ಪರ ಅನೇಕರು ಧ್ವನಿ ಎತ್ತಿದ್ದಾರೆ. ವಿದೇಶದಲ್ಲಿಯೂ ಈ ಬಗ್ಗೆ ಪರ ವ್ಯಕ್ತವಾಗಿದೆ. ಹಿಂದೂ ದೇವರನ್ನು, ಹಿಂದೂಗಳನ್ನು ಕೆಟ್ಟದ್ದಾಗಿ ಈ ಹಿಂದೆ ಅನೇಕರು ಬಿಂಬಿಸಿದ್ದರು. ಆದ್ರೆ ಈ ಬಗ್ಗೆ ಹಿಂದೂಗಳು, ಭಾರತೀಯರು ವಿಕೃತ, ಹಿಂಸಾಚಾರವಾಗಿ ಪ್ರತಿಭಟನೆ ನಡೆಸಿಲ್ಲ. ಆದ್ರೆ ಪೈಗಂಬರ್ ಬಗ್ಗೆ ಹೇಳಿದ್ದನ್ನು ಸಹಿಸದೆ ಹಿಂಸಾತ್ಮಾಕವಾಗಿ ದುಷ್ಕೃತ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.

ಕರಾವಳಿಯಲ್ಲಿ ದೈವ ದೇವರುಗಳ ನಿಂದನೆಗೆ ಹಿಂದೂ ಧರ್ಮೀಯರೂ ಯಾವತ್ತೂ ಹಿಂಸಾಚಾರಕ್ಕೆ ಇಳಿದಿಲ್ಲ…!
ದೇಶದಲ್ಲಿ ಆಗುವ ವಿಚಾರ ಬಿಟ್ಟಬಿಡಿ. ಕರಾವಳಿ ದೈವದೇವರುಗಳ ನೆಲಬೀಡು. ಇಲ್ಲಿ ಈ ಹಿಂದೆಯೂ ಮುಸ್ಲಿಂಮರು ದೈವದ ಗುಡಿ ಗೋಪುರಗಳನ್ನು ಅಪವಿತ್ರಗೊಳಿದ್ದರು. ದೈವಕ್ಕೆ ನಿಂದಿಸಿದ್ದರು. ಚಿತ್ರ ವಿಚಿತ್ರವಾಗಿ ದೇವರನ್ನು ತೋರಿಸಿದ್ದರು. ಆದರೆ ಈ ಬಗ್ಗೆ ಯಾರೂ ಕೂಡ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿಲ್ಲ. ಕಲ್ಲು ತೂರಲಿಲ್ಲ, ಪೊಲೀಸರ ಮೇಲೆ ಕಲ್ಲೆಸೆದು ಸಾರ್ವಜನಿಕ ಆಸ್ಥಿಯನ್ನು ಹಾಳು ಮಾಡಲಿಲ್ಲ..!

ಇದನ್ನೂ ಓದಿ: ಮಂಗಳೂರು: ಕಾಂಡೋಮ್ ಹಾಕಿ ಕೊರಗಜ್ಜನ ಕಟ್ಟೆಯನ್ನು ಅಪವಿತ್ರಗೊಳಿಸಿದ ಕಿಡಿಗೇಡಿಗಳು..!

ಇದನ್ನೂ ಓದಿ: ಹುಂಡಿ ಅಪವಿತ್ರ ದುಷ್ಕೃತ್ಯ: ಉಳ್ಳಾಲ ಕೊಂಡಾಣ ಪಿಲಿಚಾಮುಂಡಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಹೀನ ಕೃತ್ಯ ! – ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

ಇದನ್ನೂ ಓದಿ: ವಿಟ್ಲ: ಒಳ ಉಡುಪು ಬಿಗಿಯಾಗಿ ಧರಿಸಿ….! ಶಿವ ದೇವರ ಬಗ್ಗೆ ವಾಟ್ಸಾಪ್‌ನಲ್ಲಿ ಅವಹೇಳನ; ಹಿಂಜಾವೇ ವತಿಯಿಂದ ದೂರು

ಇದನ್ನೂ ಓದಿ: ವಿಟ್ಲ: ಹಿಂದೂ ದೈವ ದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಕಿಡಿಗೇಡಿಗಳು; ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಹಿಂಪ ಆಗ್ರಹ

ಮಹಮ್ಮದ್ ಪೈಗಂಬರ್‌ ವಿರುದ್ಧದ ಹೇಳಿಕೆ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡ ನೂಪುರ್‌ ಶರ್ಮಾ ಅವರ ಪರವಾಗಿ ಟ್ವೀಟ್‌ ಮಾಡಿದ್ದಕ್ಕೆ ಜೀವ ಬೆದರಿಕೆಗಳು ಬಂದಿವೆ ಎಂದು ಡಚ್‌ ಸಂಸದ, ’ಪಾರ್ಟಿ ಫಾರ್‌ ಫ್ರೀಡಂ’ನ ಮುಖ್ಯಸ್ಥ ಗೀರ್ಟ್‌ ವೈಲ್ಡರ್ಸ್‌ ಹೇಳಿದ್ದಾರೆ.

ಏನು ಹೇಳಿದ್ದರು ಗೀರ್ಟ್‌ ವೈಲ್ಡರ್ಸ್‌?
‘ನಾನು ಭಾರತೀಯನೂ ಅಲ್ಲ, ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು, ಪ್ರವಾದಿ ಬಗ್ಗೆ ಸತ್ಯ ಹೇಳುವುದು ಸರಿಯಲ್ಲ ಎಂಬ ವಾದವೇ ಜಾತ್ಯತೀತತೆಯ ಅರ್ಥ ಆಗಬಾರದು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಗೀರ್ಟ್‌ ವೈಲ್ಡರ್ಸ್‌ ಹೇಳಿದ್ದರು.

- Advertisement -

Related news

error: Content is protected !!