ಬೆಂಗಳೂರು: ಈ ವರ್ಷದ ಅಕ್ಟೋಬರ್‌ನಲ್ಲಿ ಮತ್ತೊಂದು ಪ್ರಾಕೃತಿಕ ವಿಸ್ಮಯ ನಡೆಯಲಿದೆ. ಇದೇ ತಿಂಗಳಲ್ಲಿ ಬ್ಲೂ ಮೂನ್‌ಗೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ‘ಒನ್ಸ್ ಇನ್ ಎ ಬ್ಲೂಮೂನ್’ ಎಂಬ ಇಂಗ್ಲಿಷ್ ನಾಣ್ಣುಡಿ ಇದೆ. ತೀರಾ ಅಪರೂಪಕ್ಕೊಮ್ಮೆ ಸಂಭವಿಸುವ ಘಟನೆಗಳನ್ನು ಈ ರೀತಿ ಹೇಳಿತ್ತಾರೆ. ಇದೀಗ ಅ.31ರಂದು ನಾವೆಲ್ಲ ಬ್ಲೂಮೂನ್‌ಗೆ ಸಾಕ್ಷಿಯಾಗಲಿದ್ದೇವೆ.

ಬ್ಲೂ ಮೂನ್ ಎಂದರೆ, ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಒಂದೇ ತಿಂಗಳ ಎರಡು ಹುಣ್ಣಿಮೆಗಳು ಬರುವ ಪ್ರಾಕೃತಿಕ ವಿದ್ಯಮಾನವನ್ನೇ ಬ್ಲೂ ಮೂನ್ ಎಂದು ಕರೆಯುತ್ತಾರೆ. ಪ್ರತಿ 2 ಅಥವಾ 3 ವರ್ಷಗಳಿಗೊಮ್ಮೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಸಂಭವಿಸುತ್ತಿದೆ ಎಂಬ ವಿಶೇಷತೆ ಬಿಟ್ಟರೆ, ಈ ಹುಣ್ಣಿಮೆ ಕೂಡ ಎಲ್ಲ ಹುಣ್ಣಿಮೆಗಳಂತೆ ಸಾಮಾನ್ಯ ಪ್ರಾಕೃತಿಕ ವಿದ್ಯಮಾನವಾಗಿದೆ.

1ಅಥವಾ 2ನೇ ತಾರೀಖಿನಂದು ಹುಣ್ಣಿಮೆ ಸಂಭವಿಸಿದರೆ ಆ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಸಂಭವಿಸುತ್ತವೆ. 2018ರಲ್ಲಿ ಬ್ಲೂಮೂನ್ ಸಂಭವಿಸಿತ್ತು. ಮುಂದಿನ ಬ್ಲೂಮೂನ್ 2023ರ ಆಗಸ್ಟ್ 31 ಸಂಭವಿಸಲಿದೆ. ಸಾಮಾನ್ಯವಾಗಿ ಈ ತಿಂಗಳ ಹುಣ್ಣಿಮೆ ಯ ವಿದ್ಯಮಾನವೆಂದರೆ ಪ್ರತಿ ತಿಂಗಳು ಒಂದು ಹುಣ್ಣಿಮೆ ಮತ್ತು ಅಮಾವಾಸ್ಯೆಇರುತ್ತದೆ. ಆದರೆ, ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬರುವ ಅಪರೂಪದ ಸಂದರ್ಭ ಇದ್ದಾಗಿದ್ದು. ಅಕ್ಟೋಬರ್ 1 ಹುಣ್ಣಿಮೆ ಹಾಗೂ ಇನ್ನೊಂದು ಹುಣ್ಣಿಮೆ ಅಕ್ಟೋಬರ್ 31ರಂದು ಬರುತ್ತದೆ ಎಂದು ಮುಂಬೈನ ನೆಹರೂ ತಾರಾಲಯದ ನಿರ್ದೇಶಕ ಅರವಿಂದ್ ಪರಾಂಜಪೇಯ್ ಹೇಳಿದ್ದಾರೆ.










