Friday, November 20, 2026
spot_imgspot_img
spot_imgspot_img

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ, ವಿಟ್ಲ ಇವರ ನೇತೃತ್ವದಲ್ಲಿ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮತ್ತು ಮಹಿಳಾ ಘಟಕ ಶಾಂತಿ ನಗರ ವಿಟ್ಲ, ಬಂಟ್ವಾಳ ತಾಲೂಕು ಇವರ ಸಹಕಾರದೊಂದಿಗೆ ತಾಲೂಕು ಮಟ್ಟದ ಒಕ್ಕಲಿಗರ ಕ್ರೀಡೋತ್ಸವ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ, ವಿಟ್ಲ ಇವರ ನೇತೃತ್ವದಲ್ಲಿ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮತ್ತು ಮಹಿಳಾ ಘಟಕ ಶಾಂತಿ ನಗರ ವಿಟ್ಲ, ಬಂಟ್ವಾಳ ತಾಲೂಕು ಇವರ ಸಹಕಾರದೊಂದಿಗೆ ತಾಲೂಕು ಮಟ್ಟದ ಒಕ್ಕಲಿಗರ ಕ್ರೀಡೋತ್ಸವವು ನ.22 ಆದಿತ್ಯವಾರದಂದು ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆ(RMSA) ವಿಟ್ಲದಲ್ಲಿ (ಮಾದರಿ ಶಾಲೆಯ ಮೇಲಿನ ಕ್ರೀಡಾಂಗಣ) ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ವ್ಯವಸಾಯ ಸೇ.ಸ.ಸಂ. ಕೆದಿಲ ಇದರ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ ಕುದ್ಮಾನ್ ನೆರವೇರಿಸಲಿದ್ದಾರೆ. ಕಬಡ್ಡಿ ಕ್ರೀಡಾಂಗಣ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಆರ್ತಿಕ್ ಪಟ್ನಾಜೆ ಮೂಲೆ, ವಾಲಿಬಾಲ್ ಕ್ರೀಡಾಂಗಣ ಉದ್ಘಾಟನೆಯನ್ನು ವಕೀಲ ಮಹೇಶ್ ಗೌಡ ಅಳಿಕೆ, ತ್ರೋಬಾಲ್ ಕ್ರೀಡಾಂಗಣ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಲಿಂಗಪ್ಪ ಗೌಡ ಅಳಿಕೆ ನೆರವೇರಿಸಲಿದ್ದಾರೆ.

ಅಪರಾಹ್ನ 2.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಬಂಟ್ವಾಳ ತಾಲೂಕು ಅಧ್ಯಕ್ಷRU ಚಿದಾನಂದ ಗೌಡ ಪೆಲತ್ತಿಂಜ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಇದರ ಸಂಚಾಲಕರು ಹಾಗೂ ಎಂಪೆನ್ನಲ್ಡ್ ಸ್ಟ್ರಕ್ಚರಲ್ ಎಂಜಿನಿಯರ್ ಪ್ರಸನ್ನ ದರ್ಬೆ ಪುತ್ತೂರು, ಉದ್ಯಮಿ ಡಿ.ಆರ್. ಪ್ರಸನ್ನ ಕುಮಾರ್ ಪುತ್ತೂರು, ವಕೀಲ ಉಮೇಶ್ ಕುಮಾರ್ ವೈ ಬಂಟ್ವಾಳ, ಕೆಪಿಟಿಸಿ ವಿಟ್ಲ ಇದರ ಜೂನಿಯರ್ ಇಂಜಿನಿಯರ್ ಶ್ರೀಮತಿ ದಮಯಂತಿ, ಯುವ ಉದ್ಯಮಿ ವರುಣ್, ಯುವ ಘಟಕ ಪುತ್ತೂರು ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಭಾಗವಹಿಸಲಿದ್ದಾರೆ.ಗೌರವ ಉಪಸ್ಥಿತಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ವಿಟ್ಲ ಅಧ್ಯಕ್ಷ ಸಿ.ಕೆ. ಕುಶಾಲಪ್ಪ ಗೌಡ ಇರಂದೂರು, ಅಕ್ಷಯ ಕ್ರೆಡಿಟ್ ಸೌಹರ್ದ ಸಹಕಾರಿ ಸಂಘ ನಿಯಮಿತ ವಿಟ್ಲ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ, ಯುವ ವೇದಿಕೆ ಗೌರವಾಧ್ಯಕ್ಷ ದಿನೇಶ್ ಗೌಡ ಮಾಡ್ತೆಲ್, ಮಹಿಳಾ ಘಟಕ ಅಧ್ಯಕ್ಷೆ ಅಮಿತಾಕೃಷ್ಣ ಕೆ.ಜಿ. ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!