Monday, July 22, 2024
spot_imgspot_img
spot_imgspot_img

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಒಡಿಯೂರು ಶ್ರೀ ಗುರುದೇವ ಶಾಲೆಗೆ ಶೇ. 100% ಫಲಿತಾಂಶ

- Advertisement -G L Acharya panikkar
- Advertisement -

ವಿಟ್ಲ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ ೧೦೦ ಫಲಿತಾಂಶ ಮತ್ತು ಶ್ರೀ ಗುರುದೇವ ಕನ್ನಡ ಮಾಧ್ಯಮ ಶಾಲೆಯು ಶೇಕಡಾ ೮೦ ರ ಫಲಿತಾಂಶವನ್ನು ಪಡೆದಿದೆ.
೪ ವಿದ್ಯಾರ್ಥಿಗಳು ಎ+ ಗ್ರೇಡ್ ಹಾಗೂ ೭ವಿದ್ಯಾರ್ಥಿಗಳು ಎ ಗ್ರೇಡ್‌ಗಳನ್ನು ಪಡೆದಿದ್ದಾರೆ.
ಆಂಗ್ಲಮಾದ್ಯಮದಲ್ಲಿ ಜಿತೇಶ್ ಪಿ ಶೆಟ್ಟಿ ೬೦೨ ಅಂಕಗಳೂ ಅಕ್ಷಿತಾ ಎನ್ ೫೭೯ ಹಾಗೂ ಅನನ್ಯಲಕ್ಷ್ಮಿ ೫೭೮ ಅಂಕಗಳನ್ನು ಪಡೆದಿದ್ದಾರೆ. ಕನ್ನಡಮಾಧ್ಯಮದಲ್ಲಿ ಶ್ರವಣ್ ಕುಮಾರ್ ೫೮೫ ಅಂಕಗಳನ್ನು ಪಡೆದಿದ್ದಾರೆ.

ಕನ್ಯಾನ ಸರಸ್ವತಿ ವಿದ್ಯಾಲಯ:
೨೦೧೯-೨೦ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ೧೦೦% ಫಲಿತಾಂಶ ದಾಖಲಿಸಿದೆ. ೧೧ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲ್ಲಿಯೂ ಉತ್ತೀರ್ಣರಾಗಿರುತ್ತಾರೆ. ಅವರನ್ನು ಶಾಲಾ ಸಂಚಾಲಕರಾದ ಈಶ್ವರ ಪ್ರಸಾದ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಮಧುರಾ ಐ ಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸರಸ್ವತಿ, ಶಿಕ್ಷಕ ವೃಂದ, ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!