- Advertisement -
- Advertisement -
ಕಲ್ಲಡ್ಕ-ಚೆರ್ಕಳ ಅಂತರ್ರಾಜ್ಯ ಹೆದ್ದಾರಿಯ ಕೆಲಿಂಜ ಪಾತ್ರ ತೋಟದಲ್ಲಿ ಮಂಗಳವಾರದಂದು ರಸ್ತೆ ಬದಿಯ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಆದರೆ ಇದೀಗ ರಸ್ತೆ ಮೇಲಷ್ಟೇ ಬಿದ್ದ ಮಣ್ಣನ್ನು ತೆಗೆಸುವ ಮೂಲಕ ಕಾಟಾಚಾರದ ಕೆಲಸ ಮಾಡಿ ಹರಕೆ ತೀರಿಸಿದ್ದಾರೆಂದು ಜನ ಆರೋಪಿಸುತ್ತಿದ್ದಾರೆ.
ರಸ್ತೆ ಬದಿ ಗುಡ್ಡ ಕುಸಿದ ಸ್ಥಳದಲ್ಲೇ ಬಂಡೆ ಕಲ್ಲೊಂದು ಯಾವುದೇ ಕ್ಷಣ ಉರುಳುವ ಹಂತದಲ್ಲಿದ್ದು ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಹತ್ತಿರದ ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
- Advertisement -