Sunday, June 14, 2026
spot_imgspot_img
spot_imgspot_img

ನೈಜೀರಿಯಾ: ತೈಲ ಟ್ಯಾಂಕರ್ ಸ್ಪೋಟ: 147 ಮಂದಿ ಸಾವು, 70 ಕ್ಕೂ ಅಧಿಕ ಮಂದಿ ಗಾಯ..!

- Advertisement -
- Advertisement -

ಉತ್ತರ ನೈಜಿರಯಾ: ತೈಲ ಟ್ಯಾಂಕರ್ ಪಲ್ಟಿಯಾಗಿದ ವೇಳೆ ಚರಂಡಿಯಲ್ಲಿದ್ದ ತೈಲ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ 147 ಮಂದಿ ಸಾವನಪ್ಪಿದ ಘಟನೆ ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ನಡೆದಿದೆ.

ತಡರಾತ್ರಿ ತೈಲ ವಾಹನ ಅಪಘಾತಕ್ಕೀಡಾಗಿತ್ತು. ಸ್ಥಳೀಯರು ಇಂಧನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಸ್ಫೋಟವು ಸಂಭವಿಸಿದೆ. ಸುಮಾರು 147 ಮಂದಿ ಸಾವನಪ್ಪಿ 70 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು. ಒಳಚರಂಡಿ ಕಂದಕಕ್ಕೆ ಇಂಧನ ಚೆಲ್ಲಿತ್ತು. ಸ್ಥಳೀಯ ನಿವಾಸಿಗಳು ಇಂಧನ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್‌ ಸ್ಫೋಟಗೊಂಡಿದೆ ಎಂದು ಜಿಗಾವಾ ಪೊಲೀಸ್ ವಕ್ತಾರ ಶಿಸು ಲಾವನ್ ಆಡಮ್ ಹೇಳಿದ್ದಾರೆ.

- Advertisement -

Related news

error: Content is protected !!