Friday, April 26, 2024
spot_imgspot_img
spot_imgspot_img

ಪ್ರಧಾನಿ ಮೋದಿಯ ವಾರಾಣಸಿ ಕಚೇರಿಯನ್ನು OLXನಲ್ಲಿ ಮಾರಾಟಕ್ಕಿಟ್ಟ ನಾಲ್ವರ ಬಂಧನ!!

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಚೇರಿ ಮಾರಾಟಕ್ಕಿದೆ ಎಂದು ಆನ್‌ಲೈನ್ ಜಾಹೀರಾತನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

OLX ನಲ್ಲಿ ಪ್ರಧಾನಿ ಕಚೇರಿ 7.5 ಕೋಟಿ ರೂ. ಗೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಜಾಹೀರಾತಿನಲ್ಲಿ ಕಟ್ಟಡವು 6,500 ಚದರ ಅಡಿ ವಿಸ್ತೀರ್ಣದ ಕಾರ್ಪೆಟ್ ಪ್ರದೇಶವನ್ನು ಹೊಂದಿರುವ 4 ಕೊಠಡಿಗಳು ಮತ್ತು 4 ಸ್ನಾನಗೃಹಗಳನ್ನು ಹೊಂದಿದೆ ಎಂದು ಬರೆಯಲಾಗಿತ್ತು. ಈ ಸಂಬಂಧ ಪೊಲೀಸರು ಏಫ್ ಐ ಆರ್ ದಾಖಲಿಸಿ, ಜಾಹಿರಾತನ್ನು ತೆಗೆಸಿದ್ದಾರೆ. ಇದರಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!