Friday, April 19, 2024
spot_imgspot_img
spot_imgspot_img

ಕೊರೊನಾ ರೂಪಾಂತರಿ ಒಮಿಕ್ರಾನ್..! ದಕ್ಷಿಣ ಕನ್ನಡ ಸೇರಿ 7 ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ; ಮತ್ತೆ ಎದುರಾಗುತ್ತಾ ಲಾಕ್‌ಡೌನ್ ಭೀತಿ

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು: ಕೊರೊನಾದಿಂದ ಬೇಸತ್ತ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಆಫ್ರಿಕಾ, ಬೆಲ್ಜಿಯಂ, ಇಸ್ರೇಜ್ ಹೀಗೆ ನಾನ ದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಕಾಟ ಶುರುವಾಗಿದೆ ಎಂದು ಅಧ್ಯಯನಕಾರರ ತಂಡ ತಿಳಿಸಿದೆ. ಇದಕ್ಕೆ ಪೂರಕವೆಂಬಂತೆ ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆಯಿಂದ ಇರುವಂತೆ ಜನರಲ್ಲಿ ಮನವಿಯನ್ನು ಮಾಡಿದೆ.

ಅಂತೆಯೇ ರಾಜ್ಯಕ್ಕೂ ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರಕ್ಕೆ ಮತ್ತೆ ತಲೆನೋವು ಉಂಟಾಗಿದೆ. ಏರುತ್ತಿರುವ ಕೊರೊನಾ ರಣಕೇಕೆಯಿಂದ ಕರ್ನಾಟಕದ ಐದು ಜಿಲ್ಲೆಗಳು ಮತ್ತೊಮ್ಮೆ ಲಾಕ್-ಡೌನ್ ಆಗುವ ಸಾದ್ಯತೆಗಳಿದ್ದು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಸಂಜೆ ಕೃಷ್ಣಾದಲ್ಲಿ ರಾಜ್ಯದ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಹತ್ವದ ಸಭೆ ಕರೆದಿದ್ದಾರೆ. ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಮಹತ್ವದ ವೀಡಿಯೋ ಕಾನ್ಸರೆನ್ಸ್ ಕರೆದಿದ್ದಾರೆ. ಇದಾದ ಬಳಿಕ ಲಾಕ್-ಡೌನ್ ಆಗುತ್ತೋ ಇಲ್ಲವೋ ಎಂದು ಇಂದಿನ ಸಭೆ ಬಳಿಕ ತಿಳಿಯಬೇಕಿದೆ. ಬಳಿಕ ತಜ್ಞರನ್ನು ಒಳಗೊಂಡ ಮಹತ್ವದ ಸಭೆಯನ್ನು ನ. 29ರಂದು ಕರೆದಿದ್ದು ಆ ಸಭೆಯಲ್ಲಿ ಕರ್ನಾಟಕದ ಕೊರೊನಾ ಲಾಕ್-ಡೌನ್ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ದೊರಕಲಿದೆ.

ಆರೋಗ್ಯ ಸಚಿವರಿಂದ ಎಚ್ಚರಿಕೆಯ ಸಂದೇಶ..!

ಒಮಿಕ್ರಾನ್ ವೈರಸ್’ನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ. ಆಫ್ರಿಕಾ, ಬೆಲ್ಜಿಯಂ, ಇಸ್ರೇಲ್ ಹೀಗೆ ವಿವಿಧ ದೇಶಗಳಲ್ಲಿ ಈ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕ್ವಾರಂಟೈನ್ ವ್ಯವಸ್ಥೆಯೂ ಮಾಡಲಾಗುತ್ತದೆ. ಮೋಜು, ಮಸ್ತಿಗೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ನಿರ್ಮಾಣ ಆಗಲೂಬಹುದು. ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಬೇಕು. ಪ್ರತಿಯೊಬ್ಬರು 2 ಡೋಸ್ ಪಡೆದುಕೊಂಡಿರಬೇಕೆಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!