Friday, March 29, 2024
spot_imgspot_img
spot_imgspot_img

ಒನ್ ನೇಷನ್ ಒನ್ ಗ್ಯಾಸ್ ಗ್ರಿಡ್ ಯೋಜನೆಗೆ ಪ್ರಧಾನಿಯಿಂದ ಚಾಲನೆ!!

- Advertisement -G L Acharya panikkar
- Advertisement -

ಪ್ರಧಾನಿ ನರೇಂದ್ರ ಮೋದಿಯವರು ಜನವರಿ 5ರಂದು ಕೊಚ್ಚಿ-ಮಂಗಳೂರು ನ್ಯಾಚುರಲ್​ ಗ್ಯಾಸ್​ ಪೈಪ್​ಲೈನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಒನ್ ನೇಷನ್ ಒನ್ ಗ್ಯಾಸ್ ಗ್ರಿಡ್ ರಚನೆಯ ಪ್ರಮುಖ ಮೈಲುಗಲ್ಲು ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್​ ಅವರೊಂದಿಗೆ ಕರ್ನಾಟಕ ಹಾಗೂ ಕೇರಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಾದ ಬಿ.ಎಸ್.​ ಯಡಿಯೂರಪ್ಪ, ಹಾಗೂ ಪಿಣರಾಯ್​​ ವಿಜಯನ್​ ಭಾಗಿಯಾಗಲಿದ್ದಾರೆ.

ಈ ಯೋಜನೆಗಾಗಿ ಗೇಲ್ (ಇಂಡಿಯಾ) ಲಿಮಿಟೆಡ್ ಸಂಸ್ಥೆ 450 ಕಿ.ಮೀ ಉದ್ದದ ಪೈಪ್‌ಲೈನ್ ರಚಿಸಿದ್ದು, ದಿನಕ್ಕೆ 12 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್​ನಷ್ಟು ಗ್ಯಾಸ್​ ಸಪ್ಲೈ ಮಾಡುವ ಸಾಮಥ್ಯ ಹೊಂದಿದೆ ಎನ್ನಲಾಗಿದೆ. ಈ ಯೋಜನೆಗೆ 3000 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಪ್​ಲೈನ್ ಎರ್ನಾಕುಲಂ, ತ್ರಿಸೂರ್, ಪಾಲಕ್ಕಾಡ್, ಮಲಪ್ಪುರಂ, ಕೊಳಿಕೋಡ್, ಕಣ್ಣೂರ್ ಮತ್ತು ಕಾಸರಗೋಡು ಮೂಲಕ ಹಾದುಹೋಗಲಿದೆ.

- Advertisement -

Related news

error: Content is protected !!