Wednesday, April 24, 2024
spot_imgspot_img
spot_imgspot_img

ಆನ್‍ಲೈನ್ ಶಿಕ್ಷಣದ ದುರುಪಯೋಗ- ವಿದ್ಯಾರ್ಥಿನಿಯರ ಫೋಟೋ ವೈರಲ್!

- Advertisement -G L Acharya panikkar
- Advertisement -

ಮಡಿಕೇರಿ: ಆನ್‍ಲೈನ್ ಶಿಕ್ಷಣವನ್ನು ದುರುಪಯೋಗಪಡಿಸಿಕೊಂಡು ಹೆಣ್ಣು ಮಕ್ಕಳ ವಿವಿಧ ಭಂಗಿಯ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಈಗಾಗಲೇ ಮಡಿಕೇರಿಯ ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಮಕ್ಕಳು ಆನ್‍ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು, ಇದನ್ನು ಕೆಲವು ದುರುಳರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳ ಫೋಟೋಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಕೊಂಡು ನಂತರ ಮಕ್ಕಳನ್ನು ಬ್ಲಾಕ್‍ಮೇಲ್ (ಬೆದರಿಸಿ) ಮಾಡಿ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದಾಗಿ ಹೇಳಲಾಗಿದೆ.

ಇವರ ಆಮಿಷಗಳಿಗೆ ಒಪ್ಪದಿದ್ದಾಗ ಹೆಣ್ಣು ಮಕ್ಕಳ ವಿವಿಧ ಭಂಗಿಯ ಫೋಟೋವನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತಿದ್ದು, ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಈ ಸಂಬಂಧ ಈಗಾಗಲೇ ಎರಡು ದಿನಗಳ ಹಿಂದೆ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

Related news

error: Content is protected !!