Thursday, May 2, 2024
spot_imgspot_img
spot_imgspot_img

ಅನ್ ಲೈನ್ ವಂಚನೆಗೆ ಬೀಳಲಿದೆ ಬ್ರೇಕ್‌- ಗೂಗಲ್‌ನಿಂದ ಡಿಜಿಕವಚ್ ಅನಾವರಣ

- Advertisement -G L Acharya panikkar
- Advertisement -
This image has an empty alt attribute; its file name is ad-2-2.jpg

ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಬ್ಯಾಂಕಿಂಗ್ ಸೇರಿದಂತೆ ಹೆಚ್ಚಿನ ಡಿಜಿಟಲ್ ವಹಿವಾಟುಗಳು ಆನ್ಲೈನ್ ಮೂಲಕವೇ ನಡೆಯುತ್ತಿರುವುದರಿಂದ ಬೆದರಿಕೆ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೂಗಲ್ ಮುಂದಾಗಿದ್ದು ಡಿಜಿಕವಚ್(DigiKavach) ಎಂಬ ಉಪಕ್ರಮವನ್ನು ಪರಿಚಯಿಸಿದೆ.

ಇದು ಸೈಬರ್ ಕ್ರೈಮ್​ನಂತಹ ಪ್ರಕರಣಗಳಿಂದ ಮುಕ್ತಿ ನೀಡುತ್ತಿದೆ. ಆರ್ಥಿಕ ವಂಚನೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.ಈ ಡಿಜಿಕವಚ್, ಆಂಡ್ರಾಯ್ಡ್ ಬಳಕೆದಾರರಿಗೆ, ಗೂಗಲ್ ಪ್ಲೇ ಪ್ರೊಟೆಕ್ಟ್ ನೀಡುತಿದ್ದು ,ಇದರ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು, ಡೇಟಾ ಮತ್ತು ಅಪ್ಲಿಕೇಶನ್ಗಳನ್ನು ಸುರಕ್ಷಿತವಾಗಿರಿಸಲು ಕಾರ್ಯನಿರ್ವಹಿಸುತ್ತದೆ.

ಬಳಕೆದಾರರು ಹಣವನ್ನು ಕಳುಹಿಸುವಾಗ ಮತ್ತು ಸ್ವೀಕರಿಸುವಾಗ ಫಿಶಿಂಗ್ ಮತ್ತು ಇತರ ವಂಚನೆ ಅಪಾಯಗಳನ್ನು ಗುರುತಿಸಲು ಸುರಕ್ಷತಾ ಎಚ್ಚರಿಕೆಗಳನ್ನು ಕಳುಹಿಸುತ್ತದೆ, ಮತ್ತು ಅನುಮಾನಾಸ್ಪದ ವಹಿವಾಟುಗಳು ಕಂಡುಬಂದರೆ ಎಚ್ಚರಿಕೆ ನೀಡಲು ಸಹಕಾರಿಯಾಗುತ್ತದೆ.

ಸೈಬರ್ ಕ್ರೈಮ್ನಂತಹ ಪ್ರಕರಣಗಳಿಂದ ಮುಕ್ತಿ ನೀಡುವುದ ಜೊತೆಗೆ, ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಆಗುವ ಹಣಕಾಸಿನ ನಷ್ಟವನ್ನು ತಡೆಗಟ್ಟವುದು ಡಿಜಿಕವಚ್‌ ನಿಂದ ಸಾಧ್ಯವಾಗಲಿದೆ.

ಆರ್ಥಿಕ ವಂಚನೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಗೂಗಲ್​ನ ಇಮೇಲ್ ಸೇವೆಯಾದ ಜಿ-ಮೇಲ್, ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್‌ವೇರ್‌ನ ಶೇಕಡಾ 99.9 ಕ್ಕಿಂತ ಹೆಚ್ಚಿನದನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತದೆ. ಈ ಮಟ್ಟದ ರಕ್ಷಣೆಯು ಪ್ರಪಂಚದಾದ್ಯಂತ 1.5 ಬಿಲಿಯನ್ ಇನ್‌ಬಾಕ್ಸ್‌ಗಳನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದ ವ್ಯಕ್ತಿಗಳು ಫಿಶಿಂಗ್ ವಂಚನೆಗಳಿಗೆ ಬಲಿಯಾಗುವ ಸಾಧ್ಯತೆ ಕಡಿಮೆ.

- Advertisement -

Related news

error: Content is protected !!