Monday, April 29, 2024
spot_imgspot_img
spot_imgspot_img

ಆಪರೇಶನ್ ಕಾವೇರಿ; ಸುಡಾನ್‌ ಯುದ್ಧ ನೆಲದಿಂದ ೧೭೦೦ಕ್ಕೂ ಅಧಿಕ ಭಾರತೀಯರ ಸ್ಥಳಾಂತರ

- Advertisement -G L Acharya panikkar
- Advertisement -

ಸುಡಾನ್ ನಲ್ಲಿ ನಡೆಯುತ್ತಿರುವ ಸೇನೆ ಹಾಗೂ ಅರೆಸೇನಾ ಪಡೆಗಳ ಯುದ್ಧ ಮತ್ತೆ ಮುಂದುವರೆದಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಲಾಗುತ್ತಿದೆ. ಈಗಾಗಲೇ ಅಪರೇಷನ್ ಕಾವೇರಿ ಮೂಲಕ 1700 ರಿಂದ 2000 ದ ವರೆಗೆ ಭಾರತೀಯರನ್ನು ಲಿಫ್ಟ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಈಗ 10ನೇ ಬ್ಯಾಚ್‌ನಲ್ಲಿ 135 ಭಾರತೀಯ ನಾಗರಿಕರನ್ನು ಸುಡಾನ್‌ನಿಂದ ಐಎಎಫ್ ಸಿ 130 ಜೆ ವಿಮಾನದಲ್ಲಿ ಯಶಸ್ವಿಯಾಗಿ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿಮಾನ ಸೌದಿ ಅರೇಬಿಯಾದ ಜೆಡ್ಡಾ ಕಡೆಗೆ ಹೋಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸುಡಾನ್​​ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಸುಡಾನ್‌ನಲ್ಲಿ ಸಿಲುಕಿರುವ ಎಲ್ಲಾ ನಾಗರಿಕರನ್ನು ಭಾರತಕ್ಕೆ ಕರೆತರುವ ಉದ್ದೇಶದಿಂದ ಭಾರತವು ಆಪರೇಷನ್ ಕಾವೇರಿ ಎಂಬ ಕಾರ್ಯಚರಣೆಯನ್ನು ಪ್ರಾರಂಭಿಸಿದೆ.

ಆಪರೇಷನ್ ಕಾವೇರಿ ಕಾರ್ಯಚರಣೆ ಈಗಾಗಲೇ ತ್ವರಿತವಾಗಿ ಮುಂದುವರೆದಿದ್ದು, IAF C-130J ಫ್ಲೈಟ್‌ನಲ್ಲಿ 135 ಪ್ರಯಾಣಿಕರೊಂದಿಗೆ 10ನೇ ಬ್ಯಾಚ್ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಕಡೆಗೆ ಭಾರತದ ಸೇನಾ ವಿಮಾನ ಹೋಗುತ್ತಿದೆ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. INS ತರ್ಕಾಶ್ ಆಪರೇಷನ್ ಕಾವೇರಿ ತುಂಬಾ ಪ್ರಬಲವಾಗಿ ಕೆಲಸ ಮಾಡುತ್ತಿದೆ. 9 ನೇ ಬ್ಯಾಚ್ ಭಾರತೀಯರು 326 ಪ್ರಯಾಣಿಕರೊಂದಿಗೆ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಈಗಾಗಲೇ ಹೋಗಿದೆ ಎಂದು ಬಾಗ್ಚಿ ಹಿಂದಿನ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದರು.

ಇದಕ್ಕೂ ಮೊದಲು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಎಂಟನೇ ಬ್ಯಾಚ್ ಭಾರತೀಯ ಪ್ರಜೆಗಳನ್ನು ಸುಡಾನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಜೆಡ್ಡಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂದು ಹೇಳಿದ್ದರು. ಈ ಬ್ಯಾಚ್​​ನಲ್ಲಿ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಕುಟುಂಬ ಸದಸ್ಯರು ಸೇರಿದಂತೆ 121 ವ್ಯಕ್ತಿಗಳನ್ನು ಕರೆತರಲಾಗಿತ್ತು.

- Advertisement -

Related news

error: Content is protected !!